ಅರಸಿನಕುಪ್ಪೆ ಶ್ರೀಮಂಜುನಾಥಸ್ವಾಮಿ ಕ್ಷೇತ್ರದಲ್ಲಿ ಮಹಾ ಶಿವರಾತ್ರಿ ಜಾತ್ರೋತ್ಸವಎಂಟು ಯಾಮಗಳಲ್ಲಿ ಶಿವರಾತ್ರಿ ಪೂಜೆ ನಡೆಯುವ ಜಿಲ್ಲೆಯ ಅಪರೂಪದ ಕ್ಷೇತ್ರಗಳಲ್ಲೊಂದಾದ ಶ್ರೀಮಂಜುನಾಥಸ್ವಾಮಿ ಕ್ಷೇತ್ರದಲ್ಲಿ ಬೆಳಗ್ಗೆ ೬ ಗಂಟೆಗೆ ಹಾಲಿನ ಅಭಿಷೇಕ, ನಂತರ ಎರಡನೆ ಯಾಮದಲ್ಲಿ ೧೧೦೮ ಎಳನೀರು ಅಭಿಷೇಕವನ್ನು ದೇವರಿಗೆ ಮಾಡಲಾಯಿತು. ಮೂರನೆ ಯಾಮದಲ್ಲಿ ಕಬ್ಬಿನ ಹಾಲಿನ ಅಭಿಷೇಕ, ನಾಲ್ಕನೆ ಯಾಮದಲ್ಲಿ ಕಲಶಾಭಿಷೇಕ, ಐದನೆ ಯಾಮದಲ್ಲಿ ಪಂಚಾಮೃತ ಅಭಿಷೇಕ, ಆರನೇ ಯಾಮದಲ್ಲಿ ಜೇನುತುಪ್ಪದ ಅಭಿಷೇಕ, ಏಳನೆ ಯಾಮದಲ್ಲಿ ಜಲಾಭಿಷೇಕ ಮತ್ತು ಎಂಟನೆ ಹಾಗೂ ಕೊನೆಯ ಯಾಮದಲ್ಲಿ ವಿಶೇಷವಾಗಿ ಭಸ್ಮಾಭಿಷೇಕ ನೆರವೇರಿಸಲಾಯಿತು.