ಇಂದು ಉದ್ಯೋಗ ಆಧಾರಿತ ವಿಶೇಷ ಕೋರ್ಸ್ ಉದ್ಘಾಟನೆ ಮಾಹಿತಿ ತಂತ್ರಜ್ಞಾನ ಆಧಾರಿತ, ಉದ್ಯಮ ಸಂಯೋಜಿತ ಹಾಗೂ ಉದ್ಯೋಗ ಆಧಾರಿತ ವಿಶೇಷ ಕೋರ್ಸ್ಗಳನ್ನು ಜ. 25ರಂದು ಮಡಿಕೇರಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಅನುದೀಪ್ ಫೌಂಡೇಶನ್ ಮತ್ತು ಐಬಿಎಂ ಕೌಶಲ್ಯ ಅಭಿವೃದ್ಧಿ ವೇದಿಕೆ (ಸ್ಕಿಲ್ಸ್ ಬಿಲ್ಡ್ ಪ್ಲಾಟ್ಫಾರ್ಮ್) ಇವರ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.