ಸಹಕಾರ ಸಂಘ ಚುನಾವಣೆಯಲ್ಲಿ ಶರವಣಕುಮಾರ್ ನೇತೃತ್ವದ ತಂಡ ಜಯಭೇರಿಕುಶಾಲನಗರ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘದ 2024-29 ರ ಆಡಳಿತ ಮಂಡಳಿಗೆ ಚುನಾವಣೆಯಲ್ಲಿ ಸಹಕಾರಿ ಧುರೀಣ ಟಿ.ಆರ್.ಶರವಣಕುಮಾರ್ ನೇತೃತ್ವ ತಂಡ ಜಯಭೇರಿ ಗಳಿಸಿದೆ. ಸಾಮಾನ್ಯ ವರ್ಗದಿಂದ ಜೋಸೆಫ್ ವಿಕ್ಟರ್ ಸೋನ್ಸ್ (516), ಎಲ್ ನವೀನ್(513), ಜಿ ಡಿ ನವೀನ್(486), ಎಂ ವಿ ನಾರಾಯಣ (530),ಶರವಣ ಕುಮಾರ್ (562), ಶರತ್ ಕೆ ಪಿ ( 531), ಶಿವಪ್ರಕಾಶ್ ಎನ್ ಈ (501), ಸುರೇಶ್ ಕುಮಾರ್ ಕೆ (472), ಆಯ್ಕೆಯಾಗಿದ್ದಾರೆ. ಸುರೇಶ್ ಕೆ ಎನ್ (523) ಪ್ರಥಮ ಬಾರಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.