ಕೊಡವ ಲ್ಯಾಂಡ್ಗೆ ಗೌಡ ಸಮಾಜ, ಒಕ್ಕಲಿಗರ ವಿರೋಧಕೊಡಗಿನಲ್ಲಿ ಶೇ.80 ರಿಂದ 90ರಷ್ಟು ಮಂದಿ ಗೌಡರು, ಒಕ್ಕಲಿಗರು, ಹಿಂದುಳಿದ ವರ್ಗದವರು ಹಾಗೂ ಇತರೆ ಜನಾಂಗದವರು ವಾಸಿಸುತ್ತಿದ್ದಾರೆ. ಕೇವಲ ಅಲ್ಪಸಂಖ್ಯಾತ ವರ್ಗಕ್ಕೆ ಪ್ರತ್ಯೇಕ ರಾಜ್ಯ ಅಥವಾ ಸ್ವಾಯತ್ತತೆ ನೀಡುವುದು ಎಷ್ಟು ಸಮಂಜಸ ಎಂದು ಬೆಂಗಳೂರಿನ ಕೊಡಗು ಗೌಡ ಸಮಾಜದಲ್ಲಿ ಭಾನುವಾರ ನಡೆದ ಬೆಂಗಳೂರಿನ ಎಲ್ಲ ಗೌಡ ಸಮಾಜ ಮತ್ತು ಒಕ್ಕಲಿಗ ಸಂಘಟನೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಭೆಯಲ್ಲಿ ಸಮಾಲೋಚಿಸಲಾಯಿತು.