ಕುಂಡ್ಯೋಳಂಡ ಕಪ್ ಕೊಡವ ಕೌಟುಂಬಿಕ ಹಾಕಿ: ನಾಳಿಯಂಡ, ಬಾದುಮಂಡ ತಂಡ ನಿರಾಯಾಸ ಗೆಲವುಕೊಡಗಿನಲ್ಲಿ ಈಗ ಕೌಟುಂಬಿಕ ಹಾಕಿ ಹಬ್ಬದ ಸಂಭ್ರಮ. ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯ ಸೋಮವಾರದ ಪಂದ್ಯಗಳಲ್ಲಿ ನಾಳಿಯಂಡ, ಬಾದುಮಂಡ , ಕೋಣಿಯಂಡ, ಕೋಲು ಮಾದಂಡ, ಐಚುಡ, ಪಾಲಂಗಡ ಸೇರಿದಂತೆ ವಿವಿಧ ತಂಡಗಳು ಮುನ್ನಡೆ ಸಾಧಿಸಿದವು.