ಕೋಡಂಬೂರು: ಅಯೋಧ್ಯ ಮಂತ್ರಾಕ್ಷತೆ ಸ್ವೀಕಾರ ಕಾರ್ಯಕ್ರಮಬೆಳಗ್ಗೆ 9 ಗಂಟೆಗೆ ಮಂತ್ರಾಕ್ಷತೆಯು ದೇವಾಲಯಕ್ಕೆ ಆಗಮಿಸುತ್ತಿದ್ದಂತೆ ಚಂಡೆ ವಾದ್ಯ ಸಮೇತ ಗ್ರಾಮಸ್ಥರು, ಮಾತೆಯರು ಪೂರ್ಣಕುಂಭ ಸ್ವಾಗತ ಕೋರಿದರು. ಮಂತ್ರಾಕ್ಷತೆಗೆ ದೇವಾಲಯದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಲಾಯಿತು. ನಂತರ ಮಧ್ಯಾಹ್ನ ದೇವಾಲಯ ಸಮಿತಿಯಿಂದ ಅನ್ನಸಂತರ್ಪಣೆ ನಡೆದು ಮಧ್ಯಾಹ್ನ 2 ಗಂಟೆಗೆ ನಡೆದ ಸಭಾ ಕಾರ್ಯಕ್ರಮ ನಡೆಯಿತು.