ಪತ್ರಿಕಾ ವಿತರಕ ಪ್ರಕಾಶ್‌ಗೆ ಹೊಸ ಸೈಕಲ್ ಕೊಡುಗೆ ಕಳೆದ ಆರು ದಶಕಗಳಿಂದ ಕುಶಾಲನಗರದಲ್ಲಿ ಪತ್ರಿಕಾ ವಿತರಕರಾಗಿರುವ ವಿ.ಪಿ. ಪ್ರಕಾಶ್ ಅವರ ಸೈಕಲ್ ಇತ್ತೀಚೆಗೆ ಕಳವಾಗಿದ್ದು, ಇದರಿಂದ ಪತ್ರಿಕೆಗಳ ವಿತರಣೆಗೆ ಅನಾನುಕೂಲ ಉಂಟಾಗಿತ್ತು. ಇದನ್ನು ಮನಗಂಡ ಕುಶಾಲನಗರದ ಸಮಾಜಸೇವಕ ಕೆ.ಎಸ್. ಶಶಿಕುಮಾರ್ ಗೌಡ, ಕೆ.ಜಿ. ಮನು ಮತ್ತು ಸ್ನೇಹಿತರ ಬಳಗ ಸೇರಿ ಗುರುವಾರ ಬೆಳಗ್ಗೆ ಸೈಕಲ್ ನ್ನು ಪ್ರಕಾಶ್ ಗೆ ಹಸ್ತಾಂತರಿಸಿದರು.