ಕುಕನೂರಲ್ಲಿ ಜಿಲ್ಲಾಮಟ್ಟದ ಪಶು ಪಾಲಿಕ್ಲಿನಿಕ್ ಮಂಜೂರು: ಬಸವರಾಜ ರಾಯರಡ್ಡಿಕೊಪ್ಪಳ ಜಿಲ್ಲಾ ಮಟ್ಟದ ಪಶು ಪಾಲಿಕ್ಲಿನಿಕ್ ಅನ್ನು ಕುಕನೂರು ಪಟ್ಟಣಕ್ಕೆ ಮಂಜೂರು ಮಾಡಿಸಲಾಗಿದೆ. ಈಗಾಗಲೇ ಕಟ್ಟಡಕ್ಕೆ ಸಹ ಅನುದಾನ ನೀಡಿದ್ದು, ಕಟ್ಟಡ ಕಾಮಗಾರಿ ಪ್ರಾರಂಭಕ್ಕೆ ಸಹ ಸೂಚಿಸಿದ್ದೇನೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.