ನಾಟಕಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬ: ವಿಜಯ ರಾಮೇಗೌಡನಾಟಕಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬ. ಕುರುಕ್ಷೇತ್ರ, ರಾಮಾಯಣದಂತಹ ನಾಟಕಗಳ ಮೂಲಕ ನಮ್ಮ ಹಿರಿಯರು ನಮ್ಮ ಬದುಕಿಗೆ ಮಾರ್ಗದರ್ಶನ ಮಾಡಿದ್ದಾರೆ. ನಾಟಕದ ಪಾತ್ರದಾರಿಗಳಿಂದ ದುಷ್ಟ ನಿಗ್ರಹ, ಶಿಷ್ಠ ಸಂರಕ್ಷಕ ಮಹತ್ವ ಸಾರುತ್ತಲೇ ಸತ್ಯ ಮತ್ತು ಧರ್ಮಕ್ಕೆ ಅಂತಿಮ ಜಯ. ನಾವೆಲ್ಲರೂ ಧರ್ಮಮಾರ್ಗದಲ್ಲಿಯೇ ಸಾಗಬೇಕು ಎನ್ನುವುದನ್ನು, ಸಾಮಾಜಿಕ ಸಂದೇಶವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸ ಮಾಡಿದ್ದಾರೆ.