ಕಾರ್ಗಿಲ್ ವಿಜಯೋತ್ಸವ ದೇಶಪ್ರೇಮದ ಸಂಕೇತ: ಯೋಗೇಶ್ಕಾರ್ಗಿಲ್ ಯುದ್ಧದಲ್ಲಿ ಬಲಿದಾನವಾದ ಸೈನಿಕರನ್ನು ನಾವು ನೆನೆಯಬೇಕು. ಕಾರ್ಗಿಲ್ ವಿಜಯೋತ್ಸವಕ್ಕೆ 25 ವರ್ಷ ತುಂಬಿದೆ. ದೇಶಭಕ್ತಿ, ರಾಷ್ಟ್ರರಕ್ಷಣೆ, ಸೈನಿಕರ ಸೇವೆ, ತ್ಯಾಗ ಎಲ್ಲವನ್ನೂ ಯುವಕರಿಗೆ ತಿಳಿಸಿಕೊಟ್ಟು ಅವರನ್ನು ದೇಶರಕ್ಷಕರನ್ನಾಗಿ ಮಾಡುವ ಹೊಣೆಗಾರಿಕೆ ಎಲ್ಲರ ಮೇಲಿದೆ. ವಿದ್ಯಾರ್ಥಿ ದಿಸೆಯಿಂದಲೇ ದೇಶ ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು.