25 ವಾರ ಪೂರೈಸಿದ ಕಾವೇರಿ ಚಳವಳಿ: ತಾತ್ಕಾಲಿಕ ಮುಂದೂಡಿಕೆನೀರಿಲ್ಲದ ಸಮಯದಲ್ಲಿ ರೈತರಿಗೆ ನೀರೊದಗಿಸಲು ಪೇಚಾಡುವ ಸರ್ಕಾರಗಳು ಹೆಚ್ಚುವರಿ ನೀರು ಹರಿದುಬಂದಾಗ ಅದನ್ನು ಯೋಜಿತ ರೀತಿಯಲ್ಲಿ ಸಂಗ್ರಹಿಸುವುದಕ್ಕೆ, ಹೊಸದಾಗಿ ಕೆರೆ-ಕಟ್ಟೆಗಳನ್ನು ನಿರ್ಮಿಸಿ ತುಂಬಿಸಲು, ಎಲ್ಲಾ ಕೆರೆಗಳಿಗೆ ನಾಲಾ ಸಂಪರ್ಕ ಜಾಲ ಸಂಪರ್ಕಿಸುವುದಕ್ಕೆ ಯೋಜನೆಯನ್ನು ರೂಪಿಸಿಲ್ಲ. ವ್ಯರ್ಥವಾಗಿ ನೀರನ್ನು ಹರಿಯಬಿಟ್ಟು ಕುಳಿತಿರುವುದು ಸರ್ಕಾರಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ.