ಗ್ರಾಪಂವಾರು ಬಗರ್ ಹುಕುಂ ಸಾಗುವಳಿ ಅರ್ಜಿ ವಿಲೇವಾರಿ: ಸಚಿವ ಚಲುವರಾಯಸ್ವಾಮಿ4.38 ಗುಂಟೆಗಿಂತ ಹೆಚ್ಚಿನ ಜಮೀನು ಹೊಂದಿದವರಿಗೆ ಮಂಜೂರು ಮಾಡಿರುವುದು, ಅರಣ್ಯ ಪ್ರದೇಶದ ಮಂಜೂರು, ಅರ್ಜಿ ಸಲ್ಲಿಸಿರುವ ರೈತರ ಬದಲಿಗೆ ಬೇರೊಬ್ಬ ರೈತರಿಗೆ ಮಂಜೂರಾತಿ ಪತ್ರ ನೀಡಿರುವುದು ಕಂಡು ಬಂದಿರುವುದರಿಂದ ತನಿಖೆಗೊಳಪಡಿಸಲಾಗಿದೆ. ಈ ರೀತಿಯ ಪ್ರಕರಣಗಳು ಮಳವಳ್ಳಿ ತಾಲೂಕಿನಲ್ಲಿ ಹೆಚ್ಚಾಗಿ ಕಂಡುಬಂದಿವೆ. ಆದ್ದರಿಂದ ಅಂತಹ ಕಡತಗಳನ್ನು ತನಿಖೆ ವರದಿ ನಂತರ ಪರಿಶೀಲನೆ ಮಾಡಲಾಗುವುದು.