ಮಕ್ಕಳ ಸಮಸ್ಯೆಗಳನ್ನು ಶಾಸನ ಸಭೆಗಳಲ್ಲಿ ಚರ್ಚಿಸಿ: ಹಿರಿಯ ಪತ್ರಕರ್ತ ಜಿ.ಮುಮ್ತಾಜ್ ಆಲೀಮ್ಬಾಲ ಕಾರ್ಮಿಕ ಪದ್ಧತಿ , ಬೀದಿ ಮಕ್ಕಳ ಮೇಲಿನ ದೌರ್ಜನ್ಯ, ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲಿನ ಅತ್ಯಾಚಾರ, ಪೋಷಕರು ಸೇರಿ ಸಮಾಜ ವಿರೋಧಿ ಶಕ್ತಿಗಳು ಮಕ್ಕಳನ್ನು ಭಿಕ್ಷಾಟನೆಗೆ ಹಚ್ಚುವುದು, ಮಕ್ಕಳ ಅಪಹರಣ, ಮಕ್ಕಳ ಆರೋಗ್ಯ ಸಮಸ್ಯೆಗಳು ಸೇರಿ ಲಕ್ಷಾಂತರ ಮಕ್ಕಳು ರಾಷ್ಟ್ರದಲ್ಲಿ ಬಳಲುತ್ತಿದ್ದಾರೆ. ಆದರೆ, ಶಾಸನಸಭೆಗಳಲ್ಲಿ ಮಕ್ಕಳ ಸಮಸ್ಯೆಗಳ ಕುರಿತು ಸಂಸದರಾಗಲಿ, ಶಾಸಕರಾಗಲಿ ಚರ್ಚೆಯನ್ನೇ ನಡೆಸುತ್ತಿಲ್ಲ.