ಮಂಡ್ಯ ಜಿಲ್ಲೆಯಲ್ಲಿ ಸಂಕ್ರಾಂತಿ ಆಚರಣೆಗೆ ಸಡಗರದ ಸಿದ್ಧತೆ...!ಹೆಣ್ಣು ಮಕ್ಕಳು-ಮಹಿಳೆಯರಿಗೆ ಎಳ್ಳು-ಬೆಲ್ಲ ಹಂಚುವ ಸಂಭ್ರಮ, ಗ್ರಾಮೀಣ ಜನರಿಗೆ ರಾಸುಗಳ ಕಿಚ್ಚು ಹಾಯಿಸುವ ಸಡಗರ, ಯುವಕರಿಗೆ ದನ-ಕರುಗಳ ಮೈತೊಳೆದು ಶುಚಿಗೊಳಿಸುವುದರೊಂದಿಗೆ ಸಂಕ್ರಾಂತಿಗೆ ವಿಶೇಷ ಕಳೆ ತರಲು ಸನ್ನದ್ಧ. ಹಬ್ಬದ ಮುನ್ನಾ ದಿನವಾದ ಭಾನುವಾರ ನಗರದ ಪೇಟೆ ಬೀದಿ, ಹಳೇ ಎಂಸಿ.ರಸ್ತೆ, ತರಕಾರಿ ಮಾರುಕಟ್ಟೆ ರಸ್ತೆಗಳಲ್ಲಿ ಜನಜಂಗುಳಿ ತುಂಬಿತ್ತು.