ಐಟಿ-ಬಿಟಿ ತರ್ತೀನಿ, ಉಚಿತ ಸೇವೆ ಆಸ್ಪತ್ರೆ ಕಟ್ತೀವಿ: ಎಸ್ಸೆಸ್ಸೆಂಮಧ್ಯ ಕರ್ನಾಟಕದ ಜನರು, ವಿಶೇಷವಾಗಿ ಯುವಜನರ ಬಹು ದಶಕಗಳ ಬೇಡಿಕೆಯಾದ ಐಟಿ-ಬಿಟಿ ಕಂಪನಿಗಳನ್ನು ಶೀಘ್ರವೇ ತರುವ ಜೊತೆಗೆ ಬಡವರಿಗೆ ಉಚಿತ ಆರೋಗ್ಯ ಸೇವೆ ಒದಗಿಸಲು ಆಸ್ಪತ್ರೆ ನಿರ್ಮಿಸುವುದಾಗಿ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಭರವಸೆ ನೀಡಿದ್ದಾರೆ.