• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news

karnataka-news

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಟಿಎಪಿಸಿಎಂಎಸ್ ಚುನಾವಣೆ: ಒಬ್ಬರು ಅವಿರೋಧ ಆಯ್ಕೆ, 26 ಮಂದಿ ಕಣದಲ್ಲಿ
ಮಳವಳ್ಳಿ ಟಿಎಪಿಸಿಎಂಎಸ್‌ನ ಐದು ವರ್ಷದ ಅವಧಿಗೆ ಸೆ.28ರಂದು ನಡೆಯಲಿರುವ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಒಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದು, 26 ಮಂದಿ ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ.
ರೈತಕವಿ ದೊ.ಚಿ.ಗೌಡ ದಸರಾ ಕವಿಗೋಷ್ಠಿಗೆ ಆಯ್ಕೆ ಅಭಿನಂದನೆ
ವಿಶ್ವ ವಿಖ್ಯಾತ ಮೈಸೂರು ದಸರಾ ಅಂಗವಾಗಿ ಸೆ.23 ರಂದು ಮೈಸೂರು ವಿಶ್ವವಿದ್ಯಾಲಯದ ಬಿ.ಎಂ.ಶ್ರೀ ಸಂಭಾಗಣದಲ್ಲಿ ನಡೆಯಲಿರುವ ಪ್ರಭಾತ, (ಪ್ರಾದೇಶಿಕ) ಕವಿಗೋಷ್ಠಿಯಲ್ಲಿ ರೈತ ಕವಿ ಎಂದೇ ಗುರುತಿಸಲ್ಪಡುವ ದೊಡ್ಡರಸಿನಕೆರೆ ಗ್ರಾಮದ ದೊ.ಚಿ.ಗೌಡರು ಕವಿತೆ ವಾಚನ ಮಾಡಲಿದ್ದಾರೆ.
ಸೌಹಾರ್ದ ಸಾಮರಸ್ಯ ನಡಿಗೆಗೆ ಪೊಲೀಸರ ಬ್ರೇಕ್: ಬಹಿರಂಗ ಸಭೆಗೆ ಸೀಮಿತ
ಸಾಮೂಹಿಕ ಗಣೇಶ ವಿಸರ್ಜನಾ ವೇಳೆ ಹಿಂದೂಗಳು ನಡೆಸಿದ್ದ ಬೃಹತ್ ಶಕ್ತಿ ಪ್ರದರ್ಶನದ ಪ್ರತಿಯಾಗಿ ಸೌಹಾರ್ದ ಸಾಮರಸ್ಯ ನಡಿಗೆ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದ ಪ್ರಗತಿಪರ ಸಂಘಟನೆಗಳಿಗೆ ಪೊಲೀಸರು ಬ್ರೇಕ್ ಹಾಕಿದ್ದರಿಂದ ಪಟ್ಟಣದಲ್ಲಿ ಸೋಮವಾರ ಬಹಿರಂಗ ಸಭೆಗೆ ಸೀಮಿತವಾಯಿತು.
ಸಾಮಾಜಿಕ, ಶೈಕ್ಷಣಿಕ ಜಾತಿ ಸಮೀಕ್ಷೆಯಲ್ಲಿ ಒಕ್ಕಲಿಗ ಎಂದು ಬರೆಸಿ: ಮಲ್ಲಿಕಾರ್ಜುನಗೌಡ
ಧರ್ಮದ ಕಲಂನಲ್ಲಿ ಹಿಂದೂ ಎಂಬುದಾಗಿ ಬರೆಸಬೇಕು. ನಮ್ಮ ಜಾತಿಯಲ್ಲಿ ಹಲವು ಉಪ ಜಾತಿಗಳಿಗೆ ಒಕ್ಕಲಿಗ ಎಂಬುದ ಬದಲಾಗಿ ಒಕ್ಕಲಿಗ ಎಂಬುದಾಗಿ ನಮೋದಿಸಿದರೆ ಅದು ಬೇರೆ ಜಾತಿಗೆ ಸೇರುತ್ತದೆ. ಹಾಗಾಗಿ ಕಡ್ಡಾಯವಾಗಿ ಒಕ್ಕಲಿಗ ಎಂಬುದಾಗಿಯೇ ಬರೆಸಬೇಕು.
ಐವರು ಸಾಧಕರಿಗೆ ನಾಳೆ ಚುಂಚಶ್ರೀ ಪ್ರಶಸ್ತಿ ಪ್ರದಾನ
ಸೆ.24 ರಂದು ಬೆಳಗ್ಗೆ 10 ಗಂಟೆಗೆ ರಾಜ್ಯ ಮಟ್ಟದ 46ನೇ ಶ್ರೀಕಾಲಭೈರವೇಶ್ವರ ಜಾನಪದ ಕಲಾ ಮೇಳವನ್ನು ಉದ್ಘಾಟಿಸಿದ ಬಳಿಕ ಶ್ರೀಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಚುಂಚಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಕ್ರಷರ್ ಸಾಮಗ್ರಿ ತುಂಬಿ ಟಿಪ್ಪರ್, ಟ್ರ್ಯಾಕ್ಟರ್, ಲಾರಿಗಳ ಓಡಾಟಕ್ಕೆ ಖಂಡನೆ
ಜಲ್ಲಿ, ಕಲ್ಲು, ಎಂ ಸ್ಯಾಂಡ್ ಸೇರಿದಂತೆ ಕ್ರಷರ್‌ನ ಸಾಮಗ್ರಿಗಳನ್ನು ತುಂಬಿ ದಿನನಿತ್ಯ ಸಾವಿರಾರು ಟಿಪ್ಪರ್, ಟ್ರ್ಯಾಕ್ಟರ್ ಹಾಗೂ ಲಾರಿಗಳು ಓಡಾಡುತ್ತಿರುವುದರಿಂದ ರಸ್ತೆ ಹದಗೆಡುವ ಜೊತೆಗೆ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದೆ ಎಂದು ಆರೋಪಿಸಿ ತಾಲೂಕಿನ ಕಾಳೇನಹಳ್ಳಿ ಹಾಗೂ ಟಿ.ಎಂ.ಹೊಸೂರು ಗ್ರಾಮಸ್ಥರು ಪ್ರತಿಭಟನೆ.
ಶಿಲುಬೆ ಬೆಟ್ಟದ ಗಣಿಗಾರಿಕೆ ಖಂಡಿಸಿ ಪ್ರತಿಭಟನೆ
ಹಸು, ಕುರಿ ಜೊತೆ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್‌. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದರು. ಇದೇ ವೇಳೆ ಜಯಬಸವಾನಂದ ಸ್ವಾಮೀಜಿ ಮಾಧ್ಯಮದೊಂದಿಗೆ ಮಾತನಾಡಿ, ಗಣಿಗಾರಿಕೆ ಸ್ಫೋಟದಿಂದ ಸುತ್ತಮುತ್ತಲಿನ ಮನೆಗಳಲ್ಲಿ ಬಿರುಕು ಉಂಟಾಗಿದ್ದು, ಭಾರಿ ವಾಹನ ಸಂಚಾರದಿಂದ ರಸ್ತೆಗಳು ಹಾಳಾಗಿವೆ. ಕಾಡು ಪ್ರಾಣಿಗಳು ಗ್ರಾಮಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿವೆ. ಶಾಲಾ ಬಸ್ಸುಗಳು ಹಾಳಾದ ರಸ್ತೆಯಿಂದ ಸಂಚಾರ ನಿರಾಕರಿಸಿರುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆ ಆಗಿದೆ. ಮಳೆಗಾಲದಲ್ಲಿ ಕಲುಷಿತ ನೀರು ಮತ್ತು ಧೂಳು ಹೊಲಗಳಿಗೆ ಹರಿದು ಕಾಫಿ, ಮೆಣಸು, ಭತ್ತದ ಬೆಳೆ ಹಾನಿಯಾಗುತ್ತಿದೆ. ಹೊಸಮಠ, ಕಲ್ಲುಕೊಪ್ಪಲು, ಮಟದಕೊಪ್ಪಲು, ಹಾರೋಹಳ್ಳಿ, ನವಿಲಹಳ್ಳಿ, ಬಡಗಿಕೊಪ್ಪಲು, ದಿಣ್ಣೆಕೊಪ್ಪಲು ಮುಂತಾದ ಹಳ್ಳಿಗಳ ಜನತೆ "ಗಣಿಗಾರಿಕೆ ನಿಲ್ಲಿಸಬೇಕು " ಎಂದು ಒಗ್ಗಟ್ಟಿನಿಂದ ಧ್ವನಿ ಎತ್ತಿದ್ದಾರೆ ಎಂದರು.
ದಲಿತ ಸಮುದಾಯದೊಂದಿಗೆ ಕ್ರೈಸ್ತ ಧರ್ಮದ ತಳುಕು
ಒಳಮೀಸಲಾತಿಯ ಹಂಚಿಕೆಯನ್ನು ದಿಕ್ಕು ತಪ್ಪಿಸಲು ರಾಜ್ಯ ಸರ್ಕಾರ ಹೊರಟಿದ್ದು, ಪರಿಶಿಷ್ಟ ಜಾತಿಗಳೊಂದಿಗೆ ಕ್ರೈಸ್ತ ಎನ್ನುವ ಪದವನ್ನು ತಳುಕು ಹಾಕುತ್ತಿರುವುದನ್ನು ಸರ್ಕಾರ ಕೂಡಲೇ ಕೈ ಬಿಡಬೇಕು. ಇಲ್ಲವಾದರೆ ಎಲ್ಲ ಜಿಲ್ಲೆಗಳಲ್ಲಿ ದಲಿತರು ಬೀದಿಗಿಳಿಯಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ಕೊಡುತ್ತಿದ್ದೇವೆ ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು. ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಕ್ರಿಶ್ಚಿಯನ್ ಜಾತಿಗಳನ್ನು ಸೇರಿಸುವುದು ಸಂವಿಧಾನ ವಿರೋಧಿ. ಸಂವಿಧಾನದ ೩೪೧ನೇ ವಿಧಿಯ ವಿರುದ್ಧವಾಗಿ ಸಮೀಕ್ಷೆ ನಡೆಸಲಾಗುತ್ತಿದೆ. ಎರಡು ತಿಂಗಳ ಹಿಂದಷ್ಟೇ ನಾಗಮೋಹನ್ ದಾಸ್ ಆಯೋಗವು ೧೫೦ ಕೋಟಿ ರುಪಾಯಿ ವೆಚ್ಚದಲ್ಲಿ ಸಮಗ್ರ ಸಮೀಕ್ಷೆ ನಡೆಸಿತ್ತು. ಇದೀಗ ಮತ್ತೆ ಸಮೀಕ್ಷೆ ನಡೆಸುವುದು ಅನಗತ್ಯ ಎಂದರು.
ಎಸ್‌ಆರ್‌ಎಸ್‌ ಶಾಲೆಯಲ್ಲಿ ದಸರಾ ಬೊಂಬೆಗಳ ಉತ್ಸವ
ಇಂದಿನ ಮಕ್ಕಳಲ್ಲಿ ನಮ್ಮ ದೇಶೀಯ ಪರಂಪರೆ ಹಾಗೂ ದಸರಾ ಬೊಂಬೆಗಳ ಹಿನ್ನೆಲೆ ಮತ್ತು ಮಹತ್ವವನ್ನು ತಿಳಿಸಿಕೊಡುವ ಉದ್ದೇಶದಿಂದ ಸೋಮವಾರ ನಗರದ ಎಸ್.ಆರ್.ಎಸ್. ಪ್ರಜ್ಞಾ ವಿದ್ಯಾ ಶಾಲೆಯಲ್ಲಿ ’ದಸರಾ ಬೊಂಬೆ ಸಂಭ್ರಮ - ೨೦೨೫’ ಅನ್ನು ಸಾಂಪ್ರದಾಯಿಕವಾಗಿ ಆಯೋಜಿಸಲಾಗಿತ್ತು. ಮಕ್ಕಳಿಗೆ ದಸರಾ ಬೊಂಬೆ ಸಂಭ್ರಮದ ಮಹತ್ವ, ಹಾಗೂ ಹತ್ತು ದಿನಗಳ ಕಾಲ ಅಂದಿನಿಂದಲು ದಸರಾ ಬೊಂಬೆಗಳ ಪ್ರದರ್ಶನ ನಡೆಸುತ್ತಿದ್ದ ಹಿಂದಿರುವ ಉದ್ದೇಶವೇನೆಂದು ಸವಿಸ್ತಾರವಾಗಿ ವಿವರಿಸಲಾಯಿತು. ಆ ಮೂಲಕ ಇಂದಿನ ಮಕ್ಕಳಿಗೆ ನಮ್ಮ ಸಂಸ್ಕೃತಿ ಹಾಗೂ ದಸರಾ ಹಬ್ಬದ ಇತಿಹಾಸವನ್ನು ಪರಿಚಯಿಸುವುದರೊಂದಿಗೆ ಸೆ.22 ರಿಂದ ಅಕ್ಟೋಬರ್‌ 1ರವರೆಗೆ ಹತ್ತು ದಿನಗಳ ಬೊಂಬೆಗಳನ್ನು ಇಡಲಾಗುವುದು.
ರಾಮನಾಥಪುರದ ಉತ್ತರಾಧಿ ಮಠದಲ್ಲಿ ಹುಂಡಿ ಕಳವು
ಉತ್ತರಾಧಿ ಮಠದ ಮುಂದಿನ ಬಾಗಿಲ ಬೀಗ ಮತ್ತು ಡೋರ್‌ ಲಾಕ್ ತೆಗೆಯಲು ಬಾಗಿಲು ಮೀಟಿ ಮುರಿದು ಒಳ ನುಗ್ಗಿರುವ ಕಳ್ಳರು ಹುಂಡಿಯನ್ನು ಹೊತ್ತೊಯ್ದಿದ್ದಾರೆ. ದೇವಾಲಯದ ವ್ಯವಸ್ಥಾಪಕರು ಸೋಮವಾರ ಬೆಳಿಗ್ಗೆ ಪೂಜೆ ಮಾಡಲು ಬಂದ ಸಮಯದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಕಳ್ಳರು ಹುಂಡಿಯನ್ನು ಹೊತ್ತೊಯ್ಯುತ್ತಿರುವ ದೃಶ್ಯವು ಪಕ್ಕದ ಮನೆಯವರಾದ ವೇದಬ್ರಹ್ಮ ಪ್ರದೀಪ್ ಅವರ ಸಿ.ಸಿ.ಕ್ಯಾಮರದಲ್ಲಿ ಸೆರೆಯಾಗಿದ್ದು, ಒಬ್ನ ಕಳ್ಳ ಮಾತ್ರ ಕಳ್ಳತನದಲ್ಲಿ ಪಾಲೊಂಡಿರುವುದು ಹಾಗೂ ಒಬ್ಬ ಹುಂಡಿಯನ್ನು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
  • < previous
  • 1
  • ...
  • 1031
  • 1032
  • 1033
  • 1034
  • 1035
  • 1036
  • 1037
  • 1038
  • 1039
  • ...
  • 14739
  • next >
Top Stories
ಮೆಕಾಲೆ ಶಿಕ್ಷಣ ನಿರ್ಮೂಲನಕ್ಕೆ ಎನ್‌ಇಪಿ ಜಾರಿ : ಮೋದಿ
8 ವರ್ಷದ ಬಾಲಕಿ ಹೊಟ್ಟೇಲಿ ಮೂರು ಕೆ.ಜಿ. ಕೂದಲು ಪತ್ತೆ! ಇದೊಂದು ಕಾಯಿಲೆ
ಜೈಪುರ ಸಾಹಿತ್ಯೋತ್ಸವ 2026ರಲ್ಲಿ ಬಾನು ಮುಷ್ತಾಕ್, ಸುಧಾಮೂರ್ತಿ
‘ಸಹಕಾರ ಸಂಘಗಳಲ್ಲಿ ಡಿಪ್ಲೊಮಾ ಮತ್ತು ಪದವೀಧರರಿಗೆ ಆದ್ಯತೆ’
ದುನಿಯಾ ವಿಜಯ್‌ ನನ್ನನ್ನು ಗ್ರೇಟ್‌ ಅಂದ್ರು: ಬೃಂದಾ ಆಚಾರ್ಯ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved