ಮೋದಿ ಅಲೆ ಮುಂದೆ, ಮಂಕಾದ ಕೈ ಗ್ಯಾರಂಟಿಮೊದಲಿನಿಂದಲೂ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂಬ ಆತ್ಮವಿಶ್ವಾಸ ಪಕ್ಷದ ಅಭ್ಯರ್ಥಿ, ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಇದ್ದೇ ಇತ್ತು. ಅದರಂತೆ ತಕ್ಕಮಟ್ಟಿಗೆ ಕೆಲಸವನ್ನೂ ಬಿಜೆಪಿ ಮಾಡಿತ್ತು. ಆದರೆ ಸತತ ಮೂರು ಬಾರಿ ಗೆದ್ದಿರುವ ಜಿಗಜಿಣಗಿ ವಿರುದ್ಧದ ಅಲೆ ಎಬ್ಬಿಸುವುದರಲ್ಲಿ ಕಾಂಗ್ರೆಸ್ ಸಫಲವಾಗಿದ್ದರೂ ಅದ್ಯಾಕೋ ಜಯ ಮಾತ್ರ ಒಲಿದು ಬರಲಿಲ್ಲ. ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದರೂ ಅವರು ಕ್ಷೇತ್ರದಲ್ಲೇ ಬಿಜೆಪಿಗೆ ಹೆಚ್ಚಿನ ಮತಗಳು ಬಂದಿದ್ದು ಆಶ್ಚರ್ಯವಾಗಿದೆ.