ಉನ್ನತ ಶಿಕ್ಷಣ ಪ್ರೋತ್ಸಾಹಕ್ಕಾಗಿ ಪಂಚಮಸಾಲಿ ಪೀಠದಿಂದ ಸಾವಿರಾರು ಪ್ರತಿಭಾನ್ವಿತರಿಗೆ ಸನ್ಮಾನಶೈಕ್ಷಣಿಕ ಸಾಧಕರಿಗೆ ಸನ್ಮಾನ, ಪ್ರೋತ್ಸಾಹ ನೀಡಬೇಕಿದೆ. ಸಮಾಜದ ಯುವಪೀಳಿಗೆ ಐಎಎಸ್, ಐಪಿಎಸ್, ಐಐಟಿಯಂಥ ಉನ್ನತಮಟ್ಟದ ಶಿಕ್ಷಣ ಪಡೆದು ಸಮಾಜಮುಖಿ ಸೇವೆ ಮಾಡುವಂತಾಗಲಿ ಎಂದು ಹರಿಹರದ ವೀರಶೈವ ಲಿಂಗಾಯಿತ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಮಹಾಸ್ವಾಮಿಜಿ ನುಡಿದಿದ್ದಾರೆ.