ಸಮಗ್ರ ಕೃಷಿ ಮಾಡಿ ಮಾದರಿಯಾದ ಕೃಷ್ಣಾಬಾಯಿಕನ್ನಡಪ್ರಭ ವಾರ್ತೆ ವಿಜಯಪುರ ಕುಡಿಯೋಕೆ ನೀರಿಲ್ಲ, ಭೀಕರ ಬರದ ಮಧ್ಯೆ ಕುಡಿಯೋದಕ್ಕೆ ನೀರು ಸಿಕ್ಕರೆ ಸಾಕೆಂದು ಜನರು ಪರದಾಟ ನಡೆಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮಹಿಳೆಯೊಬ್ಬಳು ಸಮಗ್ರ ಕೃಷಿ ಮಾಡುವ ಮೂಲಕ ಕೃಷಿ ಮಾಡುವ ಮೂಲಕ ರೈತರೇ ಹುಬ್ಬೇರುವಂತೆ ಮಾಡಿದ್ದಾಳೆ. ಕೃಷಿ ನಂಬಿದವರನ್ನು ಕೈಬಿಟ್ಟಿಲ್ಲ ಎನ್ನುವುದಕ್ಕೆ ಈ ಮಹಿಳೆಯೇ ಸಾಕ್ಷಿ ಎನ್ನಬಹುದು. 54 ವರ್ಷದ ಕೃಷ್ಣಾಬಾಯಿ ಶಿವಾಜಿ ಸಾಳುಂಕೆ ಎಂಬ ರೈತ ಮಹಿಳೆ ಈ ಸಾಧನೆಗೆ ಸಾಕ್ಷಿಯಾದವರು.