ಹೆಣ್ಣು ಮಕ್ಕಳ ಜನನದ ಮೇಲೆ ಕೀಳರಿಮೆ ಬೇಡ: ಡೀಸಿ ಪಿ.ಎನ್.ರವೀಂದ್ರಶುಕ್ರವಾರ ಜಿಲ್ಲಾಡಳಿತ, ಜಿಪಂ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಿಕ್ಕಬಳ್ಳಾಪುರ ಇವರ ಸಂಯಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಆಯೋಜಿಸಿದ್ದ “ಭ್ರೂಣ ಲಿಂಗ ಪತ್ತೆ ಶಿಕ್ಷಾರ್ಹ ಅಪರಾಧ” ಕುರಿತ ಕಾರ್ಯಾಗಾರ ಹಾಗೂ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಅಭಿಯಾನ” ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಅವರು, ಹೆಣ್ಣು ಭ್ರೂಣ ಹತ್ಯೆ ಪಿಡುಗು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದ್ದು, ಆಧುನಿಕ ಜಗತ್ತಿನಲ್ಲಿಯೂ ಅಲ್ಲಲ್ಲಿ ಮರುಕಳಿಸುತ್ತಿರುತ್ತದೆ, ಹೆಣ್ಣು ಮಕ್ಕಳ ಜನನದ ಮೇಲೆ ಕೀಳರಿಮೆ ಇಂದಿಗೂ ಪ್ರಸ್ತುತವಾಗಿರುವುದು ಆತಂಕಕಾರಿ ವಿಷಯ. ಜಿಲ್ಲೆಯಲ್ಲಿ 2001 ರ ಜನಗಣತಿಯ ಪ್ರಕಾರ 1000 ಪುರುಷರಿಗೆ, 952 ಹೆಣ್ಣುಮಕ್ಕಳು, 2011 ರ ಜನಗಣತಿಯ ಪ್ರಕಾರ 953 ಹೆಣ್ಣುಮಕ್ಕಳ ಲಿಂಗಾನುಪಾತಗವಿರುವುದು ಇದನ್ನು ಬಿಂಬಿಸುತ್ತದೆ.