• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news

karnataka-news

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಶ್ರೀರಂಗಪಟ್ಟಣ ದಸರಾ ಶಾಸಕರಿಂದ ಬನ್ನಿಮಂಟಪ, ವೇದಿಕೆ ಕಾರ್ಯಕ್ರಮ ಸ್ಥಳ ಪರಿಶೀಲನೆ
ಕಳೆದ ವರ್ಷದಂತೆ ಈ ವರ್ಷವೂ ಸಹ ಯಶಸ್ವಿಯಾಗಿ ದಸರಾ ಉತ್ಸವವನ್ನು ನಡೆಸಲು ಎಲ್ಲಾ ಅಧಿಕಾರಿಗಳು ಸಹಕಾರ ನೀಡಬೇಕು. ವೇದಿಕೆ ನಿರ್ಮಾಣದಲ್ಲಿ ಯಾವುದೇ ಲೋಪವಿಲ್ಲದಂತೆ ಆಗಬೇಕು.
ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ನೇತೃತ್ವದಲ್ಲಿ ರೈತರೊಂದಿಗೆ ಮೊದಲ ಸಭೆ ಯಶಸ್ವಿ
ಈ ಹಿಂದೆ ರೈತರಿಗೆ ಭರವಸೆ ನೀಡಿದಂತೆ ಹಲವು ರೈತರೊಂದಿಗೆ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ಮೂಲಕ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವರನ್ನು ಭೇಟಿ ಮಾಡಿದ್ದೇವೆ. ಸಚಿವರು ಈ ಹೆದ್ದಾರಿಗೆ ಯಾವುದೇ ಸರ್ವೀಸ್ ರಸ್ತೆ ಬರುವುದಿಲ್ಲ. ಆದರೂ ಕುಮಾರಸ್ವಾಮಿ ಅವರ ಒತ್ತಾಯದ ಮೇರೆಗೆ ಅಗತ್ಯ ಹಣ ಬಿಡುಗಡೆ ಮಾಡಿ ಸ್ಥಳೀಯ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಭರವಸೆ ನೀಡಿದ್ದಾರೆ.
ಸೆ.28 ರಂದು ಟಿಎಪಿಎಸಿಎಂಎಸ್ ಚುನಾವಣೆ; 25 ನಾಮಪತ್ರ ಸಲ್ಲಿಕೆ
‘ಬಿ’ ವರ್ಗದಿಂದ ಸಾಮಾನ್ಯ ಕ್ಷೇತ್ರಕ್ಕೆ ಪುರಸಭೆ ಮಾಜಿ ಅಧ್ಯಕ್ಷ ಕೆ.ಟಿ.ಗಂಗಾಧರ ಮತ್ತು ನಾಟನಹಳ್ಳಿ ಜಗದೀಶ್, ಬಿ.ಸಿ.ಎಂ ‘ಎ’ ವರ್ಗದಿಂದ ಶಶಿಧರ ಸಂಗಾಪುರ, ಬಿಸಿಎಂ ‘ಬಿ’ ವರ್ಗದಿಂದ ಹೊನ್ನೇನಹಳ್ಳಿ ಕೃಷ್ಣೇಗೌಡ, ಪರಿಶಿಷ್ಟ ಪಂಗಡದಿಂದ ಅಕ್ಕಿಹೆಬ್ಬಾಳು ಜಯರಾಮ ನಾಯಕ ತಮ್ಮ ನಾಮಪತ್ರ ಸಲ್ಲಿಸಿದರು.
ರೈತರ ಬೆಳೆಗಳಿಗೆ ಸಮರ್ಪಕ ನೀರು ಹರಿಸಲು ಕ್ರಮ: ಶಾಸಕ ಕೆ.ಎಂ.ಉದಯ್
ಲೋಕಸರ ನಾಲೆ ಅಧುನೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ನಾನು ಈ ಭಾಗದ ರೈತರಿಗೆ 2 ತಿಂಗಳ ನಂತರ ಕೃಷಿ ಚಟುವಟಿಕೆಯನ್ನು ಆರಂಭಿಸಲು ಮನವಿ ಮಾಡಿದ್ದೆ, ಅದರೂ ರೈತರು ಕೃಷಿ ಚಟುವಟಿಕೆ ಆರಂಭಿಸಿ ನೀರಿಲ್ಲದೆ ಬೆಳೆಗಳನ್ನು ಒಣಗಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ 15 ರಿಂದ 20 ದಿನಗಳ ಕಾಲ ನೀರು ಹರಿಸಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.
ಸೇವಾಕಾರ್ಯದಲ್ಲಿ ಧರ್ಮಸ್ಥಳ ಸಂಸ್ಥೆ ವಿಶ್ವದಲ್ಲೇ ಮುಂಚೂಣಿಯಲ್ಲಿ: ಎಚ್.ಟಿ.ಮಂಜು
ಧಾರ್ಮಿಕ ಕೇಂದ್ರವಾಗಿದ್ದ ಧರ್ಮಸ್ಥಳವನ್ನು ಸೇವಾ ಕೇಂದ್ರವನ್ನಾಗಿ ರೂಪಿಸಿದ ಕೀರ್ತಿ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆ ದಂಪತಿಗೆ ಸಲ್ಲುತ್ತದೆ. ಧರ್ಮವನ್ನೂ ಮೀರಿದ ಮಾನವೀಯತೆಯ ತಳಹದಿಯ ಮೇಲೆ ನಮ್ಮ ಸಂಸ್ಥೆ ಕೆಲಸ ಮಾಡುತ್ತಿದೆ.
ದೇವಾಂಗ ಕ್ರೈಸ್ತರ ಸೇರ್ಪಡೆಗೆ ದೇವಾಂಗ ಸಮಾಜದ ತೀವ್ರ ವಿರೋಧ
ದೇವಾಂಗ ಸಮಾಜವು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಹಿಂದುಳಿದಿದ್ದು, ಪ್ರತಿಸ್ಪರ್ಧಾತ್ಮಕ ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿಯೂ ಹೋರಾಡುವ ಶಕ್ತಿ ಇಲ್ಲದ ಪರಿಸ್ಥಿತಿಯಲ್ಲಿದೆ ಎಂದು ಅವರು ತಿಳಿಸಿದರು. ಇಂತಹ ಸಂದರ್ಭದಲ್ಲಿ ಹೊಸದಾಗಿ “ದೇವಾಂಗ ಕ್ರೈಸ್ತ”ರನ್ನು ೨ಎ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವುದು ಸಮಾಜಕ್ಕೆ ಮಾರಣಾಂತಿಕ ನಿರ್ಧಾರವಾಗುತ್ತದೆ. ಆದ್ದರಿಂದ ಸರ್ಕಾರ ತಕ್ಷಣವೇ ದೇವಾಂಗ ಕ್ರೈಸ್ತರನ್ನು ಪಟ್ಟಿಯಿಂದ ಕೈಬಿಡಬೇಕು ಎಂದು ಅವರು ಆಗ್ರಹಿಸಿದರು.
ಕಲ್ಪತರು ಪದವಿಪೂರ್ವ ಕಾಲೇಜಿಗೆ ಸಮಗ್ರ ಪ್ರಶಸ್ತಿ
ಬಾಲಕರ ಸಮಗ್ರ- ಬಾಲಕರ ವಿಭಾಗದಲ್ಲಿ ಖೋ ಖೋ, ವಾಲಿಬಾಲ್, ಥ್ರೋಬಾಲ್ ಪ್ರಥಮ, ಬಾಲ್ ಬ್ಯಾಡ್ಮಿಂಟನ್ ದ್ವಿತೀಯ, ರಿಲೇ ೪೦೦ ಮೀ ಮತು ೪೦೦೦ಮೀ, ೩೦೦೦ ಮೀಟರ್ ಓಟದಲ್ಲಿ ಪ್ರಥಮ. ೧೫೦೦ ಮೀ, ೮೦೦ ಮೀಟರ್ ಪ್ರಥಮ. ಬಾಲಕರ ಒಟ್ಟು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. ಬಾಲಕ- ಬಾಲಕಿಯರ ಒಟ್ಟು ಸಮಗ್ರ-ಬಾಲಕಿಯರ ವಿಭಾಗದಲ್ಲಿ ೩೦೦೦ ಓಟ ಪ್ರಥಮ, ೧೫೦೦ ಮೀಟರ್‌ ದ್ವಿತೀಯ, ೪೦೦ಮೀ ರಿಲೇ ಪ್ರಥಮ, ಥ್ರೋಬಾಲ್, ಖೋಖೋ ಪ್ರಥಮ ಸ್ಥಾನ ಪಡೆಯುವ ಮೂಲಕ ಬಾಲಕ ಮತ್ತು ಬಾಲಕಿಯರ ಒಟ್ಟು ಸಮಗ್ರ ಪಡೆದುಕೊಂಡಿದೆ.
ತಳಲೂರಿನಲ್ಲಿ ಬನ್ನಿ ಮಂಟಪ ಲೋಕಾರ್ಪಣೆ
ಹಾರನಹಳ್ಳಿ ಸಮೀಪದ ಕಸಬಾ ಹೋಬಳಿಯ ತಳಲೂರು ಗ್ರಾಮದಲ್ಲಿ ಗ್ರಾಮ ದೇವತೆ ಶ್ರೀ ಬನ್ನಿ ಮಹಾಕಾಳಿ ಅಮ್ಮನವರ ದೇವಾಲಯದ ಪ್ರಾಂಗಣದಲ್ಲಿ ನೂತನವಾಗಿ ನಿರ್ಮಿಸಿರುವ ಶಿಲಾಮಯ ಬನ್ನಿ ಮಂಟಪದ ಲೋಕಾರ್ಪಣೆ ಕಾರ್ಯಕ್ರಮ ನೂರಾರು ಭಕ್ತರ ಸಮ್ಮಖದಲ್ಲಿ ವೈಭವದಿಂದ ನಡೆಯಿತು. ಗ್ರಾಮ ದೇವರನ್ನು ಮಂಟಪದಲ್ಲಿ ಕೂರಿಸಿ ಮಹಾ ಮಂಗಳಾರತಿ ನಡೆಯಿತು. ಹಾಸನದ ವೇದ ವಿದ್ವಾನ್ ಎಂ.ವಿ.ಕೃಷ್ಣಮೂರ್ತಿ ಘನಪಾಠಿಗಳ ಆಚಾರ್ಯತ್ವದಲ್ಲಿ ವಿವಿಧ ಹವನ ಕಾರ್ಯಗಳು ನಡೆಯಿತು. ನಂತರ ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಬನ್ನಿ ಮಂಟಪವನ್ನು ಉದ್ಘಾಟಿಸಿದರು. ಗ್ರಾಮಸ್ಥರೆಲ್ಲಾ ಸೇರಿ ಶಾಸಕರನ್ನು ಹಾಗೂ ಸೇವಾರ್ಥದಾರರಾದ ಜಗದೀಶ್ ಅವರನ್ನು ಸನ್ಮಾನಿಸಿದರು.
ಮೋದಿ ಹುಟ್ಟುಹಬ್ಬ ಅಂಗವಾಗಿ ಸೇವಾ ಪಾಕ್ಷಿಕ ಅಭಿಯಾನ
ಪ್ರಧಾನಮಂತ್ರಿ ನರೇಂದ್ರ ಮೋದಿಯವರ 75ನೇ ವರ್ಷದ ಜನ್ಮದಿನದ ಅಂಗವಾಗಿ ನಡೆದ ಸೇವಾ ಪಾಕ್ಷಿಕ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಧಣಿವರಿಯದ ನಾಯಕ ನಮ್ಮ ದೇಶದ ನೆಚ್ಚಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು. ದೇಶಕ್ಕೋಸ್ಕರ ಒಂದು ದಿನವೂ ರಜೆ ಪಡೆಯದೆ ದಿನದ ೧೮ ಗಂಟೆಗಳ ಕಾಲ ನಿರಂತರವಾಗಿ ಶ್ರಮಿಸುತ್ತಿರುವ ಏಕೈಕ ನಾಯಕ. ಜಿಲ್ಲೆಯಲ್ಲೆಡೆ ರಕ್ತದಾನ ಶಿಬಿರ ಆಯೋಜಿಸುವ ಮೂಲಕ ರಾಷ್ಟ್ರ ನಾಯಕರ ಸೂಚನೆಯ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ರಕ್ತದಾನ, ಆರೋಗ್ಯ ತಪಾಸಣೆ ಶಿಬಿರ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಅಭಿಯಾನ, ಗಿಡನೆಡುವ ಅಭಿಯಾನದಂತಹ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಶಾಸಕ ಸುರೇಶ್ ಜತೆ ಜಟಾಪಟಿ ಮಾಡಿದ್ದ ಬಿಇಒ ಅಮಾನತು
ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಿಗೆ ಶಿಕ್ಷಕರ ಸಂಘದ ನಿರ್ದೇಶಕರನ್ನು ಅವಮಾನಿಸಿ ರಾತ್ರಿಯ ಸಮಯದಲ್ಲಿ ಕುಡಿದು ಫೋನ್ ಮಾಡಿ ಅವಾಚ್ಯ ಶಬ್ದದಿಂದ ನಿಂದನೆ ಮಾಡಿರುವುದು. ಶಿಶುಪಾಲನೆ ರಜೆ ನೀಡಲು ಹಣ ಪಡೆದಿರುವುದು, ಅತಿಥಿ ಶಿಕ್ಷಕರಿಂದ ಹಣ ಪಡೆದಿರುವುದು, ನಿವೃತ್ತ ಶಿಕ್ಷಕರಿಂದ ಹಣ ಪಡೆದಿರುವುದು, ಹಳೇ ವಿದ್ಯಾರ್ಥಿ ಸಂಘದಿಂದ ಎಚ್.ಪಿ.ಬಿ.ಎಸ್ ಶಾಲೆಯ ಹಣವನ್ನು ವ್ಯತ್ಯಾಸ ಮಾಡಿರುವುದು. ಕ್ಷೇತ್ರ ಕ್ರೀಡಾ ಕೂಟ ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ಕ್ಷೇತ್ರದ ಶಾಸಕರ ಹೆಸರನ್ನು ಮುದ್ರಿಸದೇ ಶಿಷ್ಟಾಚಾರ ಉಲ್ಲಂಘನೆ ಮಾಡಿರುವುದು. ಜಿಲ್ಲಾ ಪ್ರಶಸ್ತಿ ಪುರಸ್ಕೃತರಾದ ಶಿಕ್ಷಕಿ ಕಲಾವತಿ, ಇವರಿಗೆ ರಾತ್ರಿಯ ವೇಳೆ ಫೋನ್ ಕರೆ ಮಾಡಿ ಕೊಲೆ ಮಾಡುತ್ತೇನೆಂದು ಹೆದರಿಸಿ ಕೊಲೆ ಬೆದರಿಕೆ ಹಾಕಿರುವುದು ಸೇರಿದೆ.
  • < previous
  • 1
  • ...
  • 1092
  • 1093
  • 1094
  • 1095
  • 1096
  • 1097
  • 1098
  • 1099
  • 1100
  • ...
  • 14739
  • next >
Top Stories
ಮೆಕಾಲೆ ಶಿಕ್ಷಣ ನಿರ್ಮೂಲನಕ್ಕೆ ಎನ್‌ಇಪಿ ಜಾರಿ : ಮೋದಿ
8 ವರ್ಷದ ಬಾಲಕಿ ಹೊಟ್ಟೇಲಿ ಮೂರು ಕೆ.ಜಿ. ಕೂದಲು ಪತ್ತೆ! ಇದೊಂದು ಕಾಯಿಲೆ
ಜೈಪುರ ಸಾಹಿತ್ಯೋತ್ಸವ 2026ರಲ್ಲಿ ಬಾನು ಮುಷ್ತಾಕ್, ಸುಧಾಮೂರ್ತಿ
‘ಸಹಕಾರ ಸಂಘಗಳಲ್ಲಿ ಡಿಪ್ಲೊಮಾ ಮತ್ತು ಪದವೀಧರರಿಗೆ ಆದ್ಯತೆ’
ದುನಿಯಾ ವಿಜಯ್‌ ನನ್ನನ್ನು ಗ್ರೇಟ್‌ ಅಂದ್ರು: ಬೃಂದಾ ಆಚಾರ್ಯ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved