ಕರಡೋಣ ಕೆರೆ ಹೂಳು ಅಕ್ರಮ ಸಾಗಾಟಕನಕಗಿರಿ ತಾಲೂಕು ವ್ಯಾಪ್ತಿಯಲ್ಲಿ ಸಣ್ಣ ನೀರಾವರಿ ಇಲಾಖೆಗೆ ಒಳಪಡುವ ಕರಡೋಣ ಕೆರೆಯಲ್ಲಿ ಕಳೆದ ಮೂರ್ನಾಲ್ಕು ತಿಂಗಳಿಂದ ಹಗಲು ರಾತ್ರಿಯೆನ್ನದೇ ಹೂಳು ಅಕ್ರಮವಾಗಿ ಸಾಗಿಸಲಾಗುತ್ತಿದೆ. ಹಲವು ದಿನಗಳಿಂದ ಕೆರೆಯ ಅಂಗಳದಲ್ಲಿ ಜೆಸಿಬಿ, ಹಿಟಾಚಿಗಳ ಸದ್ದು ಕೇಳಿ ಬರುತ್ತಿದೆ. ಮೂಲಕ ಇಲಾಖೆಗಳ ಅನುಮತಿಯಿಲ್ಲದೇ ಟಿಪ್ಪರ್, ಟ್ರ್ಯಾಕ್ಟರ್ಗಳು ಹಗಲು-ರಾತ್ರಿಯೆನ್ನದೇ ಈ ಹೂಳು ಹೊತ್ತು ಇಟ್ಟಿಗೆ ಭಟ್ಟಿಗಳಿಗೆ ಸಾಗಿಸುತ್ತಿವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸೇರಬೇಕಿದ್ದ ಲಕ್ಷಾಂತರ ರುಪಾಯಿ ರಾಜಧನಕ್ಕೆ ಕೊಕ್ಕೆ ಬಿದ್ದಂತಾಗಿದೆ.