ಗ್ರಾಮೀಣ ಪ್ರತಿಭೆಗಳು ಕ್ರೀಡಾ ಸಾಧನೆ ಮಾಡಲಿಚನ್ನಪಟ್ಟಣ: ಮೈಸೂರಿನಲ್ಲಿ ದಸರಾ ಪ್ರಯುಕ್ತ ನಡೆಯುತ್ತಿರುವ ನೆಟ್ ಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವ ರಾಮನಗರ ನೆಟ್ ಬಾಲ್ ಅಸೋಸಿಯೇಷನ್ ಮಹಿಳಾ ಮತ್ತು ಪುರುಷರ ತಂಡಕ್ಕೆ ರೋಟರಿ ಟಾಯ್ಸ್ ಸಿಟಿ ಶಾಖೆಯಿಂದ ಟೀ ಶರ್ಟ್, ಕ್ರೀಡಾ ಸಮವಸ್ತ್ರ ಸೇರಿದಂತೆ ಕ್ರೀಡೋಪಕರಣಗಳನ್ನು ವಿತರಿಸಿ ಶುಭ ಹಾರೈಸಲಾಯಿತು.