ಜಿಲ್ಲೆಯಲ್ಲಿ ಮಳೆ ಕೊರತೆಯ ಮಧ್ಯೆ ವಿದ್ಯುತ್ಗೂ ಬರ!ಲೋಡ್ ಶೆಡ್ಡಿಂಗ್ ಬೇಸಿಗೆಯಲ್ಲಿ ಕೇಳುವ ಶಬ್ದ. ಆದರೆ ಪ್ರಸಕ್ತ ಸಾಲಿನಲ್ಲಿ ತೀವ್ರ ಮಳೆ ಕೊರತೆಯಿಂದ ಬರಗಾಲ ಆವರಿಸಿದ್ದು. ಇದರ ಮಧ್ಯೆ ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿಯೇ ಅನಿಯಮಿತ ಲೋಡ್ ಶೆಡ್ಡಿಂಗ್ ಪ್ರಾರಂಭವಾಗಿದೆ.ಹವಾಮಾನ ವೈಪರಿತ್ಯದಿಂದ ರಾಜ್ಯದ ಸೋಲಾರ್ ಮತ್ತು ಪವನ ವಿದ್ಯುತ್ಗಳಿಂದ ಅಗತ್ಯವಿರುವ ವಿದ್ಯುತ್ ಉತ್ಪಾದನೆಯಾಗುತ್ತಿಲ್ಲ, ರಾಜ್ಯದಲ್ಲಿ ವಿದ್ಯುತ್ ಅಭಾವದ ಹಿನ್ನೆಲೆ ಗದಗ ಜಿಲ್ಲೆಗೂ ಪ್ರತಿ ಗಂಟೆಗೊಮ್ಮೆ ಶೇ. 60 ರಷ್ಟು ವಿದ್ಯುತ್ ಹಂಚಿಕೆಯಲ್ಲಿ ಕೊರತೆಯಾಗುತ್ತಿದ್ದು, ಹೀಗಾಗಿ ಜಿಲ್ಲೆಯಲ್ಲಿ ಅನಿಯಮಿತ ಲೋಡ್ ಶೆಡ್ಡಿಂಗ್ ಅನಿವಾರ್ಯವಾಗುತ್ತಿದೆ. ಗ್ರಾಮೀಣ ಪ್ರದೇಶದ ಜನರಂತೂ ಕುಡಿಯುವ ನೀರಿಗೂ ಪರಿತಪಿಸುತ್ತಿದ್ದಾರೆ.