‘ನಾನು ತಪ್ಪು ಮಾಡಿದ್ದರೆ ಇನ್ನೂ ಶಿಕ್ಷೆ ಕೊಡಲಿ. ಏನೂ ತಪ್ಪು ಮಾಡದ ನನಗೆ ಈ ಶಿಕ್ಷೆ ಕೊಟ್ಟಿದ್ದಾರೆ ಎಂದು ದುಃಖಿತರಾಗಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಐದು ನಿಮಿಷ ಕಣ್ಣೀರು ಹಾಕಿದರು’ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಹೇಳಿದ್ದಾರೆ.
ಮೇಲ್ಮನೆ ಚುನಾವಣೆಗೆ ಘಟಾನುಘಟಿ ನಾಯಕರು ಸೇರಿದಂತೆ ಸೋಮವಾರ 11 ಅಭ್ಯರ್ಥಿಗಳು 17 ನಾಮಪತ್ರಗಳನ್ನು ಸಲ್ಲಿಕೆ ಮಾಡಿದ್ದಾರೆ. ಅಧಿಸೂಚನೆ ಪ್ರಕಟಗೊಂಡ ಬಳಿಕ ಈವರೆಗೆ 13 ಅಭ್ಯರ್ಥಿಗಳು 19 ಉಮೇದುವಾರಿಕೆ ಸಲ್ಲಿಸಿದ್ದಾರೆ.
ಆಟವಾಡಲೆಂದು ನಗರದ ಗಚ್ಚಿನಕಟ್ಟಿ ಕಾಲೋನಿಯಿಂದ ಭಾನುವಾರ ಕಾಣೆಯಾಗಿದ್ದ ಮೂವರು ಮಕ್ಕಳು ಸೋಮವಾರ ಇಂಡಿ ರಸ್ತೆಯಲ್ಲಿರುವ ಚರಂಡಿ ನೀರು ಶುದ್ಧೀಕರಣ ಘಟಕದಲ್ಲಿ ಶವವಾಗಿ ಪತ್ತೆಯಾಗಿವೆ.
ಕುಮಟಾ ಸಿಹಿ ಈರುಳ್ಳಿ ಬೆಳೆಗೆ ರೋಗದಿಂದಾಗಿ ಇಳುವರಿ ಇಲ್ಲದೆ ಬೆಲೆ ಗಗನಕ್ಕೇರಿದೆ. ಅಳ್ವೇಕೋಡಿ, ಹಂದಿಗೋಣ ಬಳಿ ಹೆದ್ದಾರಿಯ ಇಕ್ಕೆಲಗಳಲ್ಲಿ ರಾಶಿ ರಾಶಿ ಹಾಕಿಕೊಂಡು ಮಾರಾಟ ಮಾಡುತ್ತಿದ್ದ ನೋಟ ಈಗ ಕಾಣಿಸುತ್ತಿಲ್ಲ. ಅಲ್ಲೊಂದು ಇಲ್ಲೊಂದು ಕಡೆ ಮಾತ್ರ ಈರುಳ್ಳಿಯ ಗೊಂಚಲುಗಳು ಕಾಣಿಸುತ್ತಿವೆ.
ನಗರದ ಹವಾಮಾನದ ಕುರಿತಂತೆ ನಿಖರ ಮಾಹಿತಿಯನ್ನು ತಿಳಿಯಲು ಡಾಪ್ಲರ್ ವೆದರ್ ರಾಡಾರ್ (ಡಿಡಬ್ಲ್ಯೂಆರ್) ಅಳವಡಿಕೆ ಭಾರತದ ಹವಾಮಾನ ಇಲಾಖೆ ರೂಪಿಸಿರುವ ಯೋಜನೆಗೆ ಸ್ಥಳದ ಅಭಾವ ಉಂಟಾಗಿದ್ದು, ಯೋಜನೆ ಜಾರಿಗೆ ಹಿನ್ನಡೆಯಾಗಿದೆ.
ಅರಸೀಕೆರೆ ಮತ್ತು ಬಾಣಾವರ ನಿಲ್ದಾಣಗಳ ನಡುವೆ ಇರುವ ಲೆವೆಲ್ ಕ್ರಾಸಿಂಗ್ ತೆರವಿಗಾಗಿ ತಾತ್ಕಾಲಿಕ ಗರ್ಡರ್ ಅಳವಡಿಕೆ ಮತ್ತು ತೆಗೆದು ಹಾಕುವ ಕಾಮಗಾರಿ ಹಿನ್ನೆಲೆಯಲ್ಲಿ ಕೆಲ ರೈಲುಗಳನ್ನು ಯಶವಂತಪುರ ಮತ್ತು ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ.