ಬಹುಮುಖ ವ್ಯಕ್ತಿತ್ವ ಹೊಂದಿದ್ದ ಬಸವಣ್ಣನವರುಕನ್ನಡಪ್ರಭ ವಾರ್ತೆ ವಿಜಯಪುರ: ಸಾಂಸ್ಕೃತಿಕ ನಾಯಕ ಎನಿಸಿಕೊಳ್ಳಬೇಕಾದರೆ ತನು, ಮನ, ಭಾವ, ಆಚಾರ, ವಿಚಾರಗಳು ಪರಿಪಕ್ವಗೊಂಡು ಆಂತರ್ಯದಲ್ಲಿ ಸಂಸ್ಕರಣಗೊಂಡಾಗ ಮಾತ್ರ ಸಾಧ್ಯ. ಜತೆಗೆ ಬಾಹ್ಯದಲ್ಲಿ ಇವುಗಳನ್ನು ಕಾರ್ಯರೂಪದಲ್ಲಿ ತಂದು ಸಾಂಸ್ಕೃತಿಕ ನಾಯಕನಾಗಿ ಸಮಾಜದಲ್ಲಿ ಎತ್ತರಕ್ಕೆ ಏರಲು ಬಸವಣ್ಣನವರಿಗೆ ಸಾಧ್ಯವಾಯಿತು ಎಂದು ಪ್ರಾಧ್ಯಾಪಕ ಡಾ.ಗುರುಲಿಂಗಪ್ಪ ಧಬಾಲೆ ಹೇಳಿದರು.