ಡಿಸಿಎಂ ಡಿಕೆಶಿ ವಿರುದ್ಧ ‘ದಳಪತಿ’ಗಳ ಆಕ್ರೋಶದೇವೇಗೌಡರ ಕುಟುಂಬದ ವಿರುದ್ಧ ಪಿತೂರಿ ನಡೆಸಿದ ವ್ಯಕ್ತಿಗಳು ಯಾರು, ಏತಕ್ಕೋಸ್ಕರ ಮಾಡಿದರು ಎನ್ನುವುದು ಬಹಿರಂಗವಾಗಿದೆ. ನಾವು ಪ್ರಜ್ವಲ್ ರೇವಣ್ಣ ಪರವಾಗೇನೂ ನಿಂತಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕೆನ್ನುವುದೇ ದೇವೇಗೌಡರು, ಕುಮಾರಸ್ವಾಮಿ ಅವರ ಆಶಯವಾಗಿದೆ. ಆದರೆ, ಸಾವಿರಾರು ಹೆಣ್ಣು ಮಕ್ಕಳ ಮರ್ಯಾದೆಯನ್ನು ಬೀದಿಗೆ ತಂದಿರುವುದು ನಾಚಿಕೆಗೇಡಿನ ಸಂಗತಿ.