ಪರಂಪರೆ, ಕಲೆ,ವಾಸ್ತುಶಿಲ್ಪಗಳ ಅರಿವು ಮೂಡಿಸಿಕನ್ನಡಪ್ರಭ ವಾರ್ತೆ ರಾಣಿಬೆನ್ನೂರುನಮ್ಮ ನಾಡಿನ ಪರಂಪರೆ ಉಳಿಸುವಲ್ಲಿ ನಾಡ ಹಬ್ಬಗಳ ಪಾತ್ರ ಬಹುಮುಖ್ಯವಾಗಿದೆ ಎಂದು ಸ್ಥಳೀಯ ಜೆಸಿ ಸಂಸ್ಥೆಯ ಅಧ್ಯಕ್ಷೆ ಲಕ್ಷ್ಮೀ ಅಡಿಕೆ ಹೇಳಿದರು.ನಗರದ ಕರ್ನಾಟಕ ಸಂಘದಲ್ಲಿ ಆಯೋಜಿಸಲಾಗಿದ್ದ 87ನೇಯ ವರ್ಷದ ನಾಡಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದಿನ ಪೀಳಿಗೆಗೆ ನಮ್ಮ ಪರಂಪರೆ, ಕಲೆ,ವಾಸ್ತುಶಿಲ್ಪಗಳ ಬಗ್ಗೆ ಪ್ರಾತ್ಯಕ್ಷಿಕ ಅರಿವು ಮೂಡಿಸುವಲ್ಲಿ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ಸಹಕಾರಿಯಾಗಿವೆ. ಕಳೆದ 86 ವರ್ಷಗಳಿಂದ ಈ ವೇದಿಕೆಗೆ ನಾಡಿನ ಸಾಹಿತ್ಯ ದಿಗ್ಗಜರು,ಕಲಾವಿದರ ಆಗಮನದಿಂದ ಈ ರಂಗಮಂದಿರ ಪುಣ್ಯಕ್ಷೇತ್ರವೆನಿಸಿದೆ ಎಂದರು.