ಮದ್ದೂರಲ್ಲಿ ಮತ್ತೆ ಮೂರು ಗಣೇಶಮೂರ್ತಿಗಳ ವಿಸರ್ಜನಾ ಮೆರವಣಿಗೆಬೆಳಗ್ಗೆ 10:30ಕ್ಕೆ ಆರಂಭವಾಗಬೇಕಿದ್ದ ಮೆರವಣಿಗೆ ಎರಡು ಗಂಟೆ ತಡವಾಗಿ ಆರಂಭವಾಯಿತು. ರಾಮ ರಹೀಮ್ ನಗರ ಬಡಾವಣೆಯಿಂದ ಹೊಸ ಮಸೀದಿ ರಸ್ತೆ, ತಾಲೂಕು ಕ್ರೀಡಾಂಗಣ, ಪೇಟೆಬೀದಿ, ಹೊಸ ಮಸೀದಿ ಮೂಲಕ ಜಾನಪದ ಕಲಾತಂಡಗಳ ಆಕರ್ಷಕ ಪ್ರದರ್ಶನದೊಂದಿಗೆ ಮೆರವಣಿಗೆ ನಡೆಸಿದ ಹಿಂದೂಪರ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಸಂಜೆ ಶಿಂಷಾ ನದಿಯಲ್ಲಿ ವಿಸರ್ಜನೆ ಮಾಡಿದರು.