ತರೀಕೆರೆ ನಿಲ್ದಾಣಕ್ಕೆ ರಾತ್ರಿ ಬಸ್ಸುಗಳು ಬಾರದೇ ತೊಂದರೆತರೀಕೆರೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 206ರ ಮೂಲಕ ಹಾದುಹೋಗುವ ಕೆ.ಎಸ್.ಆರ್.ಟಿ.ಸಿ. ಬಸ್ಸುಗಳನ್ನು ನಿಗದಿತ ನಿಲ್ದಾಣದೊಳಗೆ ಬಂದು ನಿಲುಗಡೆಗೆ ಕ್ರಮ ಕೈಗೊಳ್ಳಬೇಕೆಂದು ಪುರಸಭೆ ಮಾಜಿ ಅಧ್ಯಕ್ಷ ಟಿ.ಕೆ. ರಮೇಶ್, ಮಾಜಿ ಸದಸ್ಯ ಕೃಷ್ಣ, ಪ್ರಹರ್ಷಿತ ವಿದ್ಯಾ ಸಂಸ್ಥೆ ಅಧ್ಯಕ್ಷ ಟಿ.ಆರ್. ಸೋಮಶೇಖರಯ್ಯ ಒತ್ತಾಯಿಸಿದ್ದಾರೆ.