ಮಂಡ್ಯ ಲೋಕಸಭಾ ಚುನಾವಣೆ: ಜಿಲ್ಲಾದ್ಯಂತ ಶಾಂತಿಯುತ ಹಕ್ಕು ಚಲಾವಣೆಬಿಸಿಲ ಝಳ ಹೆಚ್ಚಾಗುವುದನ್ನು ಅರಿತಿದ್ದ ಕೆಲವು ಮಹಿಳೆಯರು ಕೂಡ ಬಿಸಿಲೇರುವ ಮುನ್ನವೇ ಮತ ಚಲಾವಣೆಗೆ ಮುಂದಾಗಿದ್ದರು. ಇದೇ ಮೊದಲ ಬಾರಿಗೆ ಮತ ಚಲಾಯಿಸುವ ಹಕ್ಕು ಪಡೆದಿದ್ದವರು ತಂದೆ-ತಾಯಿಯೊಂದಿಗೆ ಮತಗಟ್ಟೆಗೆ ಬಂದು ಮತದಾನ ಮಾಡುವುದರೊಂದಿಗೆ ಹೊಸ ಅನುಭವವನ್ನು ಪಡೆದುಕೊಂಡರು. ವೃದ್ಧರು, ಅಂಗವಿಕಲರು ಕೂಡ ಮಕ್ಕಳು, ಸ್ನೇಹಿತರ ನೆರವಿನೊಂದಿಗೆ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು.