ನೆಮ್ಮದಿ ಬದುಕು ಸಾಗಿಸಲು ಕಾಂಗ್ರೆಸ್ ಬೆಂಬಲಿಸಿಕನ್ನಡಪ್ರಭ ವಾರ್ತೆ ಐಗಳಿ: 50 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ದೇಶವನ್ನು ಜಾತ್ಯಾತೀತ ಮನೋಭಾವದಿಂದ ಕಟ್ಟಿದೆ. ಹೀಗಾಗಿ ದೀನದಲಿತರು, ನಿರ್ಗತಿಗರಿಗೆ ಆಸರೆಯಾಗಿ ನೆಮ್ಮದಿ ಬದುಕು ಸಾಗಿಸಲು ಕಾಂಗ್ರೆಸ್ ಪಕ್ಷವನ್ನು ದೇಶದಲ್ಲಿ ಅಧಿಕಾರಕ್ಕೆ ತರಲು ಸಹೋದರಿ ಪ್ರಿಯಾಂಕಾ ಜಾರಕಿಹೊಳಿಯವರನ್ನು ಸಂಸದೆಯನ್ನಾಗಿ ಆಯ್ಕೆ ಮಾಡಬೇಕು ಎಂದು ಯುವ ಮುಖಂಡ ರಾಹುಲ ಜಾರಕಿಹೊಳಿ ಮನವಿ ಮಾಡಿದರು.