ಸೋಲಿನ ಭೀತಿಯಲ್ಲಿ ಬಿಜೆಪಿ ಇಲ್ಲಸಲ್ಲದ ಆರೋಪ: ಕಾಂಗ್ರೆಸ್ ಟೀಕೆಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಭೇಟಿ ನೀಡಿದ ಸಂದರ್ಭ, ಒಕ್ಕಲಿಗ ಸಮಾಜದ ಸಮಸ್ಯೆಗಳನ್ನು ಅವರ ಮುಂದಿಡುವ ಪ್ರಯತ್ನವಾಗಿಯಷ್ಟೆ ಒಕ್ಕಲಿಗ ಸಮಾಜದ ಸಭೆ ನಡೆದಿತ್ತು. ಚುನಾವಣೆಯಲ್ಲಿ ಸೋಲುವ ಆತಂಕ ಎದುರಿಸುತ್ತಿರುವ ಬಿಜೆಪಿ ಪ್ರಮುಖರು, ಇತ್ತೀಚೆಗೆ ಒಕ್ಕಲಿಗರ ಸಭೆಯಲ್ಲಿ ಉಪಮುಖ್ಯಮಂತ್ರಿ ಪಾಲ್ಗೊಂಡಿರುವುದಕ್ಕೆ ಜಾತಿಯ ಲೇಪನವನ್ನು ನೀಡಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಟೀಕಿಸಿದೆ.