ಕುಡಿತ ಬಿಟ್ಟ ನನ್ನಪ್ಪ ದೊಡ್ಡ ಬಿಲ್ಡಿಂಗ್ ಕಟ್ಟ್ಯಾನನನ್ನಪ್ಪ ಬದುಕಿನಲ್ಲಿ ಬಂದ ಕಷ್ಟಗಳನ್ನು ಎದುರಿಸದೇ ಕುಡಿತದ ಚಟಕ್ಕೆ ದಾಸನಾಗಿದ್ದ. ಅದರಿಂದ ನೊಂದಿದ್ದರು. ಅಲ್ಲಿಗೆ ನಮ್ಮ ಬದುಕೇ ಮುಗಿದು ಹೋಯಿತು ಎನ್ನುವಂತಾಗಿತ್ತು. ಆದರೆ, ಶ್ರೀಧರ್ಮಸ್ಥಳ ಮಂಜುನಾಥ ಸಂಸ್ಥೆ ಜನಜಾಗೃತಿ ವೇದಿಕೆ ನಡೆಸಿದ ಮದ್ಯವರ್ಜನ ಶಿಬಿರಕ್ಕೆ ತೆರಳಿದ್ದರಿಂದ ನನ್ನಪ್ಪ ಕುಡಿತ ಬಿಟ್ಟರು. ಇದರಿಂದ ನಮ್ಮ ಬದುಕು ಹಸನವಾಯಿತು ಎಂದು ಮದ್ಯವ್ಯಸನದಿಂದ ಮುಕ್ತವಾಗಿರುವ ಯಲಬುರ್ಗಾದ ಶರಣಗೌಡರ ಪುತ್ರಿ ಸರಸ್ವತಿ ಹೇಳಿದರು.