2 ಲಕ್ಷ ಮತಗಳ ಅಂತರದಿಂದ ಗದ್ದಿಗೌಡರ ಗೆಲುವುಬಾಗಲಕೋಟೆ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗದ್ದಿಗೌಡರ 2 ಲಕ್ಷ ಮತಗಳ ಅಂತರದಿಂದ ಜಯಗಳಿಸಲಿದ್ದಾರೆ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ವಿಶ್ವಾಸ ವ್ಯಕ್ತಪಡಿಸಿದರು. ಬಾಗಲಕೋಟೆ ಕ್ಷೇತ್ರದಿಂದ ಬಿಜೆಪಿ ಹಮ್ಮಿಕೊಂಡ ಲೋಕಸಭೆ ಚುನಾವಣಾ ಪ್ರಚಾರ ಅಂಗವಾಗಿ ನಗರದ 6 ಮತ್ತು 8ನೇ ವಾರ್ಡ್‌ನಲ್ಲಿ ಪಾದಯಾತ್ರೆ ಮೂಲಕ ಮನೆ ಮನೆಯ ಪ್ರಚಾರದಲ್ಲಿ ಮತಯಾಚನೆ ಮಾಡಿ ಅವರು ಮಾತನಾಡಿದರು. ಬಿಜೆಪಿ ಗೆಲುವು ಶತಃಸಿದ್ದ, ಜನರು ದೇಶದ ಅಭಿವೃದ್ಧಿ ಹಾಗೂ ಭದ್ರತೆ ಪರವಾಗಿದ್ದಾರೆ ಎಂದರು.