ದಾಸಿಮಯ್ಯರ ಸಂದೇಶ ಸರ್ವಕಾಲಕೂ ಪ್ರಸ್ತುತಗುಳೇದಗುಡ್ಡ: ಲಿಂಗ ಭೇದ, ಅಸ್ಪೃಶ್ಯತೆ, ಉಚ್ಛ ನೀಚ, ಮೇಲು-ಕೀಳು, ಜಾತಿ, ಮತ, ಪಂಥಗಳ ಅನಿಷ್ಟ ಭಾವನೆಗಳನ್ನು ತೊರೆದು ನಾವೆಲ್ಲ ಒಂದು ಎಂಬ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಸಂದೇಶ ಸಾರಿದ ವಚನಕಾರ ದೇವರ ದಾಸಿಮಯ್ಯನವರ ಸಂದೇಶಗಳು ಸರ್ವಕಾಲಕ್ಕು ಪ್ರಸ್ತುತವಾಗಿವೆ ಎಂದು ಗುರುಸಿದ್ದೇಶ್ವರ ಮಠದ ಬಸವರಾಜ ಶ್ರೀಗಳು ಹೇಳಿದರು.