ಕರ್ನಾಟಕಕ್ಕೆ ಡಾ. ರಾಜ್ ಕೊಡುಗೆ ಅಪಾರ: ಅಯೂಬ್ ಖಾನ್ಕನ್ನಡ ಸಂಗೀತ ಸಂಜೆ ಕಾರ್ಯಕ್ರಮ ಆಯೋಜನೆ ಮೂಲಕ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಅಭಿವೃದ್ಧಿ ಕೆಲಸಗಳಿಗೆ ಡಾ. ರಾಜಕುಮಾರ್ ನೆರವಾಗಿದ್ದರು. ಅವರು ನಟಿಸಿರುವ ಚಿತ್ರಗಳು ಕೌಟುಂಬಿಕ ಪ್ರಧಾನವಾದುದು ಸಂಸ್ಕಾರ, ಸಂಸ್ಕೃತಿಯನ್ನ ಬಿಂಬಿಸುತ್ತಿದ್ದವು. ಮಾದಕ ವಸ್ತುಗಳನ್ನ ಬಳಸದಂತೆ ಆರೋಗ್ಯ ಸಮಾಜ ನಿರ್ಮಾಣದ ಬಗ್ಗೆ ಯುವಜನತೆಗೆ ಸಂದೇಶ ನೀಡುತ್ತಿದ್ದರು. ಪೌರಾಣಿಕ, ಧಾರ್ಮಿಕ, ಸಾಮಾಜಿಕ ಸೇರಿದಂತೆ ಎಲ್ಲಾ ತರಹದ ಪಾತ್ರಗಳನ್ನ ನಿರ್ವಹಿಸಿ ಕೋಟ್ಯಾಂತರ ಕನ್ನಡಿಗರ ಮನದಲ್ಲಿ ನೆಲಸಿದ್ದಾರೆ