ಯುವ ಮತದಾರರೇ, ಕಡ್ಡಾಯವಾಗಿ ಮತದಾನ ಮಾಡಿ: ಜಿ.ಡಿ.ಶೇಖರ್ ಕರೆಯುವಕರು ತಪ್ಪದೇ ಮತದಾನ ಮಾಡಬೇಕು, ಅದರ ಜೊತೆಗೆ ತಮ್ಮ ಕುಟುಂಬದ ಹಾಗೂ ಸುತ್ತಮುತ್ತಲಿನ ಜನರನ್ನು ಕೂಡ ಕಡ್ಡಾಯವಾಗಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಬೇಕು. ಯುವಕರು ಪ್ರಜಾಪ್ರಭುತ್ವದಲ್ಲಿ ಮತದಾನದ ಮೌಲ್ಯವನ್ನು ಅರಿತುಕೊಳ್ಳಬೇಕು. ಒಂದೊಂದು ಮತಕ್ಕೂ ಬೆಲೆಯಿದೆ. ಒಂದು ಸದೃಢ ದೇಶವನ್ನು ಕಟ್ಟುವ ನಿಟ್ಟಿನಲ್ಲಿ ಮತದಾನವು ಪ್ರಮುಖ ಪಾತ್ರವಾಗಿದೆ. ಹೀಗಾಗಿ, ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು.