ಹೊಸ ಹೊಸ ಆವಿಷ್ಕಾರಗಳು ಹುಟ್ಟಿಕೊಳ್ಳುತ್ತಿದ್ದು, ತಾಂತ್ರಿಕ ವಿದ್ಯಾರ್ಥಿಗಳಾದ ನೀವು ನವನವೀನ ತಾಂತ್ರಿಕತೆಯ ಅರಿವು, ಜ್ಞಾನವನ್ನು ಪಡೆದುಕೊಂಡು ದೇಶದ ಸರ್ವತೋಮುಖ ಪ್ರಗತಿಗೆ ಪೂರಕವಾದ ಸಂಶೋಧನೆಗಳನ್ನು ಮಾಡುವತ್ತ ಕಾರ್ಯೋನ್ಮುಖರಾಗಬೇಕೆಂದು ಡಾ. ಹೆಚ್.ಪಿ ಪಾಟೀಲರು ತಿಳಿಸಿದರು.
ಬರ ಪರಿಹಾರ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ಶುರುವಾದರೂ ರೈತರಿಗೆ ಸರಿಯಾಗಿ ತಲುಪದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ರೈತರೊಂದಿಗೆ ನಾವಿದ್ದೇವೆ ಎಂಬ ವಿನೂತನ ಅಭಿಯಾನ ಆರಂಭಿಸಿದೆ
ವರ್ಷದ 365 ದಿನವೂ ಹಗಲು- ಇರುಳೆನ್ನದೇ ಕಾರ್ಯನಿರ್ವಹಿಸುವ ಪೊಲೀಸ್ ಅಧಿಕಾರಿ, ಸಿಬ್ಬಂದಿ ನ್ಯಾಯ, ರಕ್ಷಣೆ ಬಯಸಿ ಬಂದ ಜನರ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸುವ ಮೂಲಕ, ಅವರಿಗೆ ಇನ್ನಷ್ಟು ಹತ್ತಿರವಾಗಬೇಕು ಎಂದು ಸಿ.ಎನ್. ಬಸವರಾಜಪ್ಪ ದಾವಣಗೆರೆಯಲ್ಲಿ ಹೇಳಿದ್ದಾರೆ.