ಮೆಣಸಿನಕಾಯಿ ಬೆಳೆ ಉಳಿಸಲು ಟ್ಯಾಂಕರ್ ಮೊರೆಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರತಾಲೂಕಿನಾದ್ಯಂತ ಮುಂಗಾರು ಮಳೆಗಳು ಕೈಕೊಟ್ಟ ಹಿನ್ನೆಲೆ ಅಳಿದು ಉಳಿದ ಮೆಣಸಿನಕಾಯಿ ಬೆಳೆ ಉಳಿಸಿಕೊಳ್ಳಲು ರೈತರು ಟ್ಯಾಂಕರ್ ನೀರಿಗೆ ಮೊರೆಹೋಗಿದ್ದಾರೆ.ಸಮೀಪದ ಮಂಜಲಾಪೂರ ಗ್ರಾಮದ ಮಂಜುನಾಥ ನರೇಗಲ್ಲ ಸಹೋದರರು ತಮ್ಮ 8 ಎಕರೆ ಹೊಲದಲ್ಲಿ ಮೆಣಸಿನಕಾಯಿ ಬಿತ್ತನೆ ಮಾಡಿದ್ದರು. ಆಗಾಗ ಬಿದ್ದ ಅಲ್ಪ ಸ್ವಲ್ಪ ಮುಂಗಾರು ಮಳೆಯಲ್ಲಿಯೇ ಸೊಗಸಾಗಿ ಬೆಳೆದಿದ್ದ ಮೆಣಸಿನಕಾಯಿ ಬೆಳೆಗಳು ಕಳೆದ 2 ತಿಂಗಳಿಂದ ಮಳೆ ಇಲ್ಲದೆ ಒಣಗಿ ಹೋಗುವ ಹಂತಕ್ಕೆ ಬಂದಿದ್ದರಿಂದ ಟ್ಯಾಂಕರ್ ಮೂಲಕ ನೀರು ತಂದು ಬೆಳೆ ಉಳಿಸಿಕೊಳ್ಳುವ ಹರಸಾಹಸ ಪಡುವಂತಾಗಿದೆ.