ಸಂಭ್ರಮದಿಂದ ನಡೆದ ಅಂತರವಳ್ಳಿ ಬಸವೇಶ್ವರ ದೇವರ ಕೊಂಡೋತ್ಸವಅಂತರವಳ್ಳಿ ಬಸವೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಮೂರು ದಿನಗಳ ಕಾಲ ವಿಜೃಂಭಣೆಯಿಂದ ವಿವಿಧ ಪೂಜೆಗಳು, ಜಾತ್ರಾ ಮಹೋತ್ಸವ ನಡೆಯಿತು. ಸಿದ್ದೇಶ್ವರ ಬೆಟ್ಟದ ಸನ್ನಿಧಿಯಲ್ಲಿ ಪೂಜೆ ಪುನಸ್ಕಾರಗಳು ನಡೆದ ನಂತರ ಅನ್ನಸಂತರ್ಪಣೆ, ಎಳವಾರ ಪಾನಕದ ಬಂಡಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಬಂದು ಕೊಂಡದ ಬಾಯಿಗೆ ಸೌದೆಯನ್ನು ಹಾಕಲಾಯಿತು.