ಮಲೆನಾಡ ಅಭಿವೃದ್ಧಿಗೆ ಹೋರಾಡಿದವರು ಭೂಪಾಳಂ: ಬಿ.ಚಂದ್ರೇಗೌಡ ನಮ್ಮ ಸುತ್ತಲಿನ ಪರಿಸರ ಉಳಿಸಿಕೊಳ್ಳುವಲ್ಲಿ ನಾವು ವಿಫಲರಾಗಿದ್ದು, ಅದರ ಪರಿಣಾಮ ಎದುರಿಸುತ್ತಿದ್ದೇವೆ. ನೂರು ವರ್ಷದ ಇತಿಹಾಸವಿರುವ ಕಾರ್ಖಾನೆ ಉಳಿಸಲು ರಾಜಕಾರಣಕ್ಕೆ ಧ್ವನಿಯಿಲ್ಲವಾಗಿದ್ದು ದುರಂತ. ದೆಹಲಿಯಲ್ಲಿ ಗಾಂಧೀಜಿ ಹೇಳಿದ್ದನ್ನು ಇಲ್ಲಿ ಅನುಷ್ಠಾನ ಮಾಡುತ್ತಿದ್ದ ಭೂಪಾಳಂ ಚಂದ್ರಶೇಖರಯ್ಯ ದಲಿತರ ಕೇರಿಗೆ ಹೋಗಿ ಶಿಕ್ಷಣ ನೀಡಿದರು. ಸ್ವಚ್ಛತಾ ಜಾಗೃತಿ, ಅಸ್ಪೃಶ್ಯತೆ ತೊಲಗಿಸುವ ಪ್ರಯತ್ನ ಮಾಡಿದರು.