ಸಂತೆಕಸಲಗೆರೆಯಲ್ಲಿ ಸಂಭ್ರಮದಿಂದ ನಡೆದ ಸಿಡಿ ಉತ್ಸವಸಿಡಿಹಬ್ಬದ ಅಂಗವಾಗಿ ಸುತ್ತಮುತ್ತಲ ಗ್ರಾಮಗಳಲ್ಲಿ ಶ್ರೀಚೌಡೇಶ್ವರಿ ಮತ್ತು ಶ್ರೀ ಹೊಂಬಾಳಮ್ಮ ದೇವಿಯ ಕರಗಗಳನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಈ ವೇಳೆ ಗ್ರಾಮಸ್ಥರು ಕರಗಳಿಗೆ ಭಕ್ತಿ ಪೂರ್ವಕವಾಗಿ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು. ನಂತರ ರಾತ್ರಿ ಹೆಬ್ಬಾರೆ ಉತ್ಸವ, ಭಕ್ತರಿಗೆ ಅನ್ನಸಂತರ್ಪಣೆ ಹಾಗೂ ಮನರಂಜನಾ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದವು. ಸಿಡಿ ಉತ್ಸವದ ಅಂಗವಾಗಿ ಗುರುವಾರ ಬೆಳಗ್ಗೆಯಿಂದಲೇ ವಿವಿಧ ಪೂಜೆಗಳು ನಡೆದವು.