ನಂದಿ ಗಿರಿಧಾಮದಲ್ಲಿ ಕೋತಿ ಕಾಟ ನಂದಿಬೆಟ್ಟದಲ್ಲಿ ಕೋತಿಗಳು ಗೂಂಡಾಗಳಂತೆ ವರ್ತಿಸುತ್ತಿವೆ ಎಂದು ಪ್ರವಾಸಿಗರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಎಲ್ಲೆಲ್ಲೂ ಗುಂಪು ಗುಂಪಾಗಿ ಕಾಣಿಸಿಕೊಳ್ಳುವ ಕೋತಿಗ ಸ್ಥಳಾಂತರಕ್ಕೆ ಸಂಬಂಧಪಟ್ಟೆ ಇಲಾಖೆ ಮುಂದಾಗುವಂತೆ ಒತ್ತಾಯಿಸಿದ್ದಾರೆ. ಪ್ರವಾಸಿಗರನ್ನು ಹಿಂಬಾಲಿಸುವ ಕೋತಿಗಳು ಕ್ಷಣಮಾತ್ರದಲ್ಲಿ ಪ್ರವಾಸಿಗರ ಕೈಯಲ್ಲಿರುವ ವಸ್ತುಗಳನ್ನು ಕಿತ್ತುಕೊಂಡು ಮಾಯವಾಗಿಬಿಡುತ್ತವೆ.