ಹಾಸನ ಜಿಲ್ಲೆಗೂ ರಂಗಾಯಣದ ಅಗತ್ಯವಿದೆಹಾಸನ ಜಿಲ್ಲೆಯಲ್ಲಿ ರಂಗಾಯಣ ರಚನೆಯಾದರೆ ಈ ಭಾಗದ ಕಲಾವಿದರಿಗೆ ಪ್ರೋತ್ಸಾಹ ದೊರೆತಂತಾಗುತ್ತದೆ. ಮೂಡಲಪಾಯ ಯಕ್ಷಗಾನ ತರಬೇತಿ ಎರಡು ತಿಂಗಳ ಕಾಲ ನಡೆಯಲಿದ್ದು ೧೫ಕ್ಕೂ ಹೆಚ್ಚು ಪ್ರಕಾರಗಳು ಇಲ್ಲಿದೆ. ಅವುಗಳ ಪುನಶ್ವೇತನ ಆಗಬೇಕಾಗಿದೆ. ತಮ್ಮ ತಂಡ ೩೫ ವರ್ಷಗಳಿಂದ ಈ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿದ್ದು ಅನೇಕ ಯುವ ಕಲಾವಿದರನ್ನು ಬೆಳೆಸಲಾಗುತ್ತಿದೆ. ನಮ್ಮಲ್ಲಿ ಉತ್ಸಾಹವಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕೆಂದರು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ರಂಗಾಯಣ, ಕಾರ್ಯನಿರ್ವಹಿಸುತ್ತಿತ್ತು. ಹಾಸನ ಜಿಲ್ಲೆಗೆ ಮೂಡಲಪಾಯ ರಂಗಾಯಣ ಅಗತ್ಯವಿದೆ ಎಂದರು.