ಕನಿಷ್ಠ ವ್ಯಾಯಾಮವೂ ಇಲ್ಲದಿದ್ದರೆ ಹೃದಯ ಸಮಸ್ಯೆ ಗ್ಯಾರಂಟಿರಕ್ತನಾಳಗಳಲ್ಲಿ ರಕ್ತವು ಸದಾ ಸರಾಗವಾಗಿ ಹರಿಯುವಂತೆ ಕಾಪಾಡಿಕೊಂಡರೆ ಹೃದಯಾಘಾತ ಸಂಭವಿಸುವುದನ್ನು ತಡೆಯಬಹುದು ಎಂದು ಹೃದಯ ತಜ್ಞ ವೈದ್ಯ ಡಾ. ನಿರೂಪ್ ತಿಳಿಸಿದರು. ಪ್ರತಿದಿನ ಕನಿಷ್ಟ ಅರ್ಧ ಗಂಟೆ ಓಡಾಡುವುದು, ವ್ಯಾಯಾಮ ಮಾಡುವುದು, ಆದಷ್ಟು ಆಹಾರದಲ್ಲಿ ಎಣ್ಣೆ ಕಡಿಮೆ ಬಳಸಬೇಕು. ದೇಹದ ತೂಕ ಅತಿಯಾಗದಂತೆ ಜಾಗ್ರತೆ ವಹಿಸಬೇಕು. ದಿನಕ್ಕೆ ಕನಿಷ್ಟ ಎಂಟು ಗಂಟೆ ನಿದ್ರೆ ಮಾಡಿದರೆ ಹೃದಯಾಘಾತದಿಂದ ತಪ್ಪಿಸಿಕೊಳ್ಳಬಹುದು. ಕೆಲವೊಮ್ಮೆ ಮಗು ತಾಯಿ ಹೊಟ್ಟೆಯಲ್ಲಿದ್ದಾಗಲೆ ಹೃದಯ ತೂತಾತ್ತದೆ. ಇದಕ್ಕೆ ಚಿಕಿತ್ಸೆ ಲಭ್ಯವಿದೆ ಎಂದರು.