ಜಲಪಾತೋತ್ಸವ: ಜಾನಪದ ಕಲಾ ಮೆರವಣಿಗೆಗೆ ಶಾಸಕ ನರೇಂದ್ರಸ್ವಾಮಿ ಚಾಲನೆಬಣ್ಣ ಬಣ್ಣದ ಕಿರಣಗಳ ಚಿತ್ತಾರ ನೋಡಲು ಮಂಡ್ಯ, ಮೈಸೂರು, ಕೊಳ್ಳೇಗಾಲ, ಚನ್ನಪಟ್ಟಣ ಸೇರಿದಂತೆ ವಿವಿಧ ಜಿಲ್ಲೆಗಳು, ಹೊರ ರಾಜ್ಯಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸಿದ್ದರು. ಪ್ರಕೃತಿ ಸೊಬಗನ್ನು ಕಾಣ್ತುಂಬಿಕೊಂಡರು. ಜೊತೆಗೆ ಬೆಳಗ್ಗೆ 11 ರಿಂದ ರಾತ್ರಿ 11ಗಂಟೆವರೆಗೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಸವಿದರು.