ಮಾ.21ರಂದು ವೈರಮುಡಿ ಉತ್ಸವ, ಚೆಲುವನಾರಾಯಣನಿಗೆ ಕಿರೀಟಧಾರಣೆ ಮಹೋತ್ಸವವೈರಮುಡಿ ಉತ್ಸವದ ಅಂಗವಾಗಿ ಸಂಜೆ 5ಕ್ಕೆ ಮಂಡ್ಯದಿಂದ ಬರುವ ವೈರಮುಡಿ- ರಾಜಮುಡಿ ತಿರುವಾಭರಣ ಪೆಟ್ಟಿಗೆಗಳನ್ನು ಬಂಗಾರದ ಪಲ್ಲಕ್ಕಿಯಲ್ಲಿರಿಸಿ ಮೆರವಣಿಗೆ ಮಾಡಲಾಗುವುದು. ಸಂಜೆ 6.30ಕ್ಕೆ ರಾಜಮುಡಿ ಕಿರೀಟದ ಪಾರ್ಕಾವಣೆ, 7.45ರ ಸುಮಾರಿಗೆ ಗರುಡದೇವನ ಮೆರವಣಿಗೆ ನಂತರ 8 ಮಹಾಮಂಗಳಾರತಿ ಯೊಂದಿಗೆ ವೈರಮುಡಿ ಉತ್ಸವ ಮೆರವಣಿಗೆ ಆರಂಭವಾಗಲಿದೆ. ತಡರಾತ್ರಿ 3-30ಕ್ಕೆ ರಾಜಮುಡಿ ಉತ್ಸವ ಜರುಗಲಿದೆ.