ಬಡವರ ಧ್ವನಿಯಾಗಿದ್ದ ಗೋಪಾಲಗೌಡ: ರಾಜಪ್ಪಜನಪರ ಕಾಳಜಿಯ ಜತೆಗೆ ಬಡವರ ಧ್ವನಿಯಾಗಿದ್ದ ಸಮಾಜವಾದಿ ಹೋರಾಟಗಾರ ಶಾಂತವೇರಿ ಗೋಪಾಲಗೌಡರ ವಿಚಾರಧಾರೆಗಳನ್ನು ಯುವ ಸಮುದಾಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನೈತಿಕಪ್ರಜ್ಞೆ ಹೊಂದಿರುವ ಜತೆ ಬಡವರ ಪರ ಧ್ವನಿಯಾಗಿದ್ದ ಅವರು, ವಿದ್ಯಾರ್ಥಿ ಜೀವನದಿಂದಲೇ ಸ್ವಾತಂತ್ರ್ಯ ಹೋರಾಟ ಚಳವಳಿಯಲ್ಲಿ ಧುಮುಕಿದ್ದರು ಎಂದು ಸೊರಬದ ಪ್ರಗತಿಪರ ಚಿಂತಕ ರಾಜಪ್ಪ ಮಾಸ್ತರ್ ಶಿಕಾರಿಪುರದಲ್ಲಿ ಹೇಳಿದ್ದಾರೆ.