ಚುನಾವಣೆಯನ್ನು ಪ್ರಜಾಪ್ರಭುತ್ವದ ಹಬ್ಬವಾಗಿ ಆಚರಿಸಿ ಸಂಭ್ರಮಿಸಿ: ಜುಬಿನ್ ಮೊಹಪಾತ್ರಮಾ.೧೬ರಿಂದ ಆರಂಭಗೊಂಡು ಜೂ.೬ ರ ತನಕ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರಲಿದ್ದು, ಚುನಾವಣಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ದ.ಕ. ಲೋಕಸಭಾ ಕ್ಷೇತ್ರದ ೭೦೬ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸದ್ಯ ೧,೦೪,೯೬೫ ಪುರುಷರು ಹಾಗೂ ೧,೦೮,೫೧೬ ಮಹಿಳೆಯರು ಸೇರಿ ಒಟ್ಟು ೨,೧೩,೪೮೧ ಮತದಾರರಿದ್ದಾರೆ.